ಸುಳೇಭಾವಿ ಡಬಲ್ ಮರ್ಡರ್ ಕೇಸ್..!
ಆರು ಜನ ಆರೋಪಿಗಳ ಬಂಧನ
ಡಾನ್ ಪಟ್ಟಕ್ಕಾಗಿ ಸಂಬಂಧಿಗಳನ್ನೆ ಕೊಂದ ಯುವಕರು..?
ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಕೊಲೆಗಾರರನ್ನು ಬೆಳಗಾವಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಳೇಭಾವಿ ಗ್ರಾಮದ 1.ಶಶಿಕಾಂತ ಅಲಿಯಾಸ್ ಸಸಾ ಅಲಿಯಾಸ್ ಜುಟ್ಟು ಭೀಮಶಿ ಮಿಸಾಳೆ (24),
2.ಯಲ್ಲೇಶ ಸಿದರಾಯಿ ಹುಂಕರಿಪಾಟೀಲ (22),
3. ಮಂಜುನಾಥ ಶಿವಾಜಿ ಪರೋಜಿ (22),
4.ದೇವಪ್ಪ ರವಿ ಕುಕಡೊಳ್ಳಿ (26),
5. ಬಿ.ಕೆ. ಖನಗಾವಿ ಗ್ರಾಮದ ಸಂತೋಷ ಯಲ್ಲಪ್ಪ ಹಣಬರಟ್ಟಿ (20),
6. ಭರಮಣ್ಣ ನಾಗಪ್ಪ ನಾಯಕ (20) ಬಂಧಿತ ಆರೋಪಿಗಳು
ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಪಡೆದ ಡಿಸಿಪಿ ರವೀಂದ್ರ ಗಡಾದಿ ವಶಕ್ಕೆ ಪಡೆದು ವಿಚಾರಣೆ ಕೈಕೊಂಡಾಗ ವಯಕ್ತಿಕ ಜಗಳಕ್ಕಾಗಿ ಕೊಲೆ ಮಾಡಿರುವುದಾಗಿ ಹೇಳಿದ್ದಾರೆ.
ಆರು ಜನ ಯುವಕರ ಪೈಕಿ ಕೆಲವರು ಗೌಂಡಿ ಕೆಲಸಗಾರರಾಗಿದ್ದು, ಇನ್ನುಳಿದವರು ಖಾಲಿ ಇದ್ದರು.
ಕೊಲೆಯಾದ ರಣಧೀರ ಸಸಾ ಅತ್ತಿಗೆಯ ಸಹೋದರ ಹಾಗೂ ಪ್ರಕಾಶ ಮತ್ತು ಯಲ್ಲೇಶಿ ಸಂಬಂಧಿಕರಾಗಿದ್ದರೂ ಡಾನ್ ಪಟ್ಟಕ್ಕಾಗಿ ಕಿತ್ತಾಟಿ ಸತ್ತರು ಎಂದು ಬಲ್ಲವರು ಮಾತನಾಡುತ್ತಿದ್ದಾರೆ.
ಗ್ರಾಮದಲ್ಲಿಯೇ ಎರಡು ಗ್ಯಾಂಗ್ ಕಟ್ಟಿಕೊಂಡು ಮೆರೆಯುತ್ತಿದ್ದ ಇವರುಗಳ ನಡುವೆ ಜಗಳ ನಡೆದು ಪ್ರತಿಷ್ಠೆಗೆ ಬಿದ್ದು ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ.