ಬೆಳಗಾವಿ : ಮಲಪ್ರಭಾ ನದಿಗೆ ಜಿಗಿದು ವಿವಾಹಿತ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ವಿವಾಹಿತ ಪ್ರೇಮಿಗಳು ರಾಮದುರ್ಗ ತಾಲೂಕು ಮಲ್ಲಾಪುರ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡವರು. ಜಗದೀಶ ಕವಳೇಕರ ಮತ್ತು ಗಂಗಮ್ಮ ತ್ಯಾಪಿ ಎಂಬವರು ಒಬ್ಬರಿಗೊಬ್ಬರು ಅಪ್ಪಿಕೊಂಡೇ ಮಲಪ್ರಭಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


