ಬೆಂಗಳೂರು: ಬಿಗ್ ಬಾಸ್ ಕನ್ನಡ 11ನೇ ಸೀಸನ್ ಸಾಗುತ್ತಿದೆ. ಇದನ್ನು ನಡೆಸಿಕೊಡುವುದರಿಂದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕರುನಾಡಿನಲ್ಲಿ ಬಹುದೊಡ್ಡ ವೀಕ್ಷಕರು ಇದ್ದಾರೆ. ಆರಂಭದಲ್ಲಿ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುವುದು ಅನುಮಾನ ಎಂಬ ಮಾತು ಕೇಳಿ ಬಂದಿತ್ತು. ಅಂತಿಮವಾಗಿ ಆಯೋಜಕರು ಮತ್ತು ಕಲರ್ಸ್ ಕನ್ನಡ ಮಾತಿಗೆ ಒಪ್ಪಿದ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದರು. ಆದರೆ, ಇದೀಗ ಬಿಗ್ ಬಾಸ್ ಸೀಸನ್ 11 ಆರಂಭವಾದ ಎರಡು ವಾರದಲ್ಲಿ ಕಿಚ್ಚ ಸುದೀಪ್ ನಿರೂಪಣೆಗೆ ಗುಡ್ ಬೈ ಹೇಳಿದ್ದಾರೆ. ಇದು ನಿರೂಪಕನಾಗಿ ನನ್ನ ಕೊನೆಯ ಬಿಗ್ ಬಾಸ್ ಸೀಸನ್ ಎಂದು ಅವರು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಬಿಗ್ ಬಾಸ್ ಗೆ ಅಪಾರವಾದ ಪ್ರೀತಿ ತೋರಿಸಿರುವುದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು. ಕಾರ್ಯಕ್ರಮಕ್ಕೆ ಸಿಕ್ಕಿರುವ ಟಿಆರ್ ಪಿ ನೋಡಿದರೆ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ನೀವು ತೋರಿಸಿರುವ ಪ್ರೀತಿ 10+1 ವರ್ಷಗಳಿಂದ ಜೊತೆಯಾಗಿ ಪ್ರಯಾಣಿಸಿದ್ದೇನೆ. ಈಗ ನಾನು ಏನು ಮಾಡಬೇಕು ಅಂದುಕೊಂಡಿದ್ದೇನೋ ಅದರೊಂದಿಗೆ ಮುಂದುವರೆಯುವ ಸಮಯ ಬಂದಿದೆ. ಇದು ಬಿಗ್ ಬಾಸ್ ಕಾರ್ಯಕ್ರಮಕ್ಕೆ ನನ್ನ ಕೊನೆಯ ಸೀಸನ್ ಆಗಿದೆ. ನನ್ನ ನಿರ್ಧಾರವನ್ನು ಕಲರ್ ಹಾಗೂ ಬಿಗ್ ಬಾಸ್ ಅನುಸರಿಸುವ ಎಲ್ಲರಿಗೂ ಗೌರವಿಸುತ್ತದೆ ಎನ್ನುವುದನ್ನು ನಾನು ನಂಬುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ ಮತ್ತು ನಾನು ಕೂಡ ನನ್ನ ಅತ್ಯುತ್ತಮವಾಗಿ ನಿಮ್ಮೆಲ್ಲರನ್ನು ರಂಜಿಸುತ್ತೇನೆ ಎಂದು ಅವರು ಹೇಳಿದ್ದಾರೆ.