ಬೆಳಗಾವಿ :
ಡಾ. ಅರವಿಂದ ಕುಲಕರ್ಣಿಯವರ ನೇತೃತ್ವದಲ್ಲಿ ರಂಗ ಸಂಪದ ತಂಡದವರು ಎರಡು ದಿನಗಳ ಕಾಲ ರಂಗ ತರಬೇತಿ ಕಾರ್ಯಾಗಾರವನ್ನು ನಗರದ ಕನ್ನಡ ಸಾಹಿತ್ಯ ಭವನದ ಸಭಾಭವನದಲ್ಲಿ ಹಮ್ಮಿಕೊಂಡಿದ್ದರು.
ಎರಡು ದಿನಗಳ ಈ ತರಬೇತಿ ಶಿಬರವು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಕಾರ್ಯಾಗಾರದಲ್ಲಿ 16 ವಯಸ್ಸಿನಿಂದ 70 ವರ್ಷ ವಯಸ್ಸಿನ ವರೆಗೆ ಎಲ್ಲ ವಯೋಮಾನದ ಒಟ್ಟು 25 ಉತ್ಸಾಹಿ ರಂಗಾಸಕ್ತರು ಭಾಗವಹಿಸಿದ್ದರು.
ರಂಗಾಸಕ್ತರಿಗೆ ವೈಭವ ಲೋಕೂರ ತರಬೇತಿ ನೀಡಿದರು. ತರಬೇತಿದಾರ ಲೋಕೂರರಿಂದ ಹಲವಾರು ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡ ಕಲಾವಿದರು ಹುಮ್ಮಸ್ಸಿನಿಂದ ಶಿಬಿರವನ್ನು ಸಂಭ್ರಮಿಸಿದರು.