ಬೈಲಹೊಂಗಲ: 2024- 25 ನೇ ಸಾಲಿನ ಎಸ್ ಎಸ್ ಎಲ್ ಸಿ ಮಕ್ಕಳ ಬೋರ್ಡ್ ಪರೀಕ್ಷೆಯ ತೃತಿಯ ಭಾಷೆ ಹಿಂದಿ ವಿಷಯದ ಪರೀಕ್ಷಾ ತೋಶಾ ದಿನದಿಂದ ದಿನಕ್ಕೆ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಅಂತೆಯೇ ಬೈಲ್ಹೊಂಗಲ್ ತಾಲೂಕಿನ ಮುರಕಿಭಾವಿ ಸರಕಾರಿ ಪ್ರೌಢಶಾಲೆಯ ಮಕ್ಕಳಿಗೆ ಬೆಳಗಾವಿಯ ಶಿಕ್ಷಣ ಪ್ರೇಮಿ ಒಬ್ಬರು ಗುಪ್ತದಾನಿಗಳು ಕಾಣಿಕೆ ರೂಪದಲ್ಲಿ ಈ ಗ್ರಂಥವನ್ನು ವಿದ್ಯಾರ್ಥಿಗಳಿಗೆ ಹಂಚಲು ವ್ಯವಸ್ಥೆ ಮಾಡಿದ್ದು ನಾವು ಇಲ್ಲಿ ನೆನಪಿಸಬಹುದು. ಕಾರ್ಯಕ್ರಮ ಪ್ರೌಢಶಾಲೆ ವಿದ್ಯಾರ್ಥಿನಿಯರ ಸ್ವಾಗತ ದೊಂದಿಗೆ ಪ್ರಾರಂಭವಾಯಿತು, ಶ್ರೀಮತಿ ಎಂ ಪಿ ಕುರೇರ ಸ್ವಾಗತಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಆರ್ ಸಿ ಕಂಠಿಯವರು ವಹಿಸಿದ್ದರು. ಇಂಚಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ ಜಿ ಕರೇರುದ್ರನವರ್ ಅವರು ಅತಿಥಿ ಸ್ಥಾನವನ್ನು ಅಲಂಕರಿಸಿದ್ದರು. ಪುಸ್ತಕ ಬರೆದ ಎನ್ ಎಫ್ ಕಿತ್ತೂರ ಅವರು ಮಕ್ಕಳಿಗೆ ಪುಸ್ತಕದ ಬಗೆಗೆ ತಿಳಿಸುತ್ತಾ ಮೇಲಿನಂತೆ ನುಡಿದರು. ಎಚ್ ಡಿ ಕೋಟಿ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು. ಎಸ್ ಎಸ್ ಕಡಕೋಳ ಶಿಕ್ಷಕಿಯರು ವಂದಿಸಿದರು.