ದೆಹಲಿ :
ಶುಕ್ರವಾರ ಸಂಜೆ ದೆಹಲಿ ಸಾರ್ವಜನಿಕ ಶಾಲೆ ಸಭಾಂಗಣದಲ್ಲಿ ಏರ್ಪಡಿಸಿದ್ದ “ಬಿಲ್ಲವೋತ್ಸವ-೨೦೨೩” ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಅವರನ್ನು ಸನ್ಮಾನಿಸಲಾಯಿತು.
ಕತಾರ್ ದೇಶದಲ್ಲಿ ಕನ್ನಡ ಭಾಷೆ ಸಂಸ್ಕೃತಿಯನ್ನು ಬೆಳೆಸುತ್ತ, ಕರ್ನಾಟಕ ಸಂಘ ಕತಾರ್ ಸದಸ್ಯತ್ವವನ್ನು ದಾಖಲೆಯ ಸಂಖೆಗೆ ಹೆಚ್ಚಿಸಿದ ಹೆಮ್ಮೆಗೆ, ಕನ್ನಡ ಚಲನಚಿತ್ರಗಳನ್ನು ಕತಾರ್ ನಲ್ಲಿ ಬಿಡುಗಡೆ ಮಾಡಲು ವ್ಯವಸ್ಥೆ ಮಾಡಿಕೊಡುವುದಕ್ಕೆ, ಪರಿಸರ ಪರ ಜಾಗೃತಿಗೆ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮ ಸುಪ್ರಸಿದ್ದಗೊಳಿಸಿರುವರು, ಕರೋನ ಮಹಾಮಾರಿಯ ತಾಂಡವದ ಕಾಲದಲ್ಲಿ ‘ಒಂದೇ ಭಾರತ್’ ವಿಶೇಷ ವಿಮಾನ ಸೇವೆಯಲ್ಲಿ ಅವಶ್ಯಕತೆಯಿರುವ ಭಾರತೀಯರನ್ನು ಕತಾರಿನಿಂದ ಮಾತೃ ಭೂಮಿಗೆ ಹಿಂದಿರುಗಲು ಸಹಾಯ ಮಾಡಿರುವುದಕ್ಕೆ ಒಂದು ಕಿರುಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಕತಾರ್ ಬಿಲ್ಲವಾಸ್ ಸಂಘದ ಅಧ್ಯಕ್ಷ ರಘುನಾಥ ಅಂಚನ್, ಉಪಾಧ್ಯಕ್ಷ ಅಮಿತ್ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ ಸೀಮಾ ಪೂಜಾರಿ, ಬಹರೈನ್ ಬಿಲ್ಲವಾಸ್ ಸಂಘದ ಪ್ರಧಾನ ಕಾರ್ಯದರ್ಶಿ ರೂಪೇಶ್ ಶಾಲಿಯನ್, ಬಹರೈನ್ ಬಿಲ್ಲವಾಸ್ ಸಂಘದ ಪೂರ್ವಾಧ್ಯಕ್ಷ ಅಜಿತ್ ಬಂಗೇರಾ , ಚಲನಚಿತ್ರ ನಟ ಪೃಥ್ವಿ ಅಂಬಾರ್, ಪ್ರಸಿದ್ಧ ಚಿಂತಕ ಡಾ.ಅರುಣ್ ಉಲ್ಲಾಳ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.