ಕನ್ನಡದ ಕಣ್ಮಣಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರನ್ನು ಕತಾರಿನಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾಗಿ ಎರಡನೇ ಬಾರಿಗೆ ಚುನಾವಣೆಯ ಮೂಲಕ ಆಯ್ಕೆ ಮಾಡಲಾಗಿದೆ ಇವರು ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಡಿಯಲ್ಲಿ ನೊಂದಾಯಿಸಿಕೊಂಡಿರುವ ಸಂಸ್ಥೆಗಳ ಪ್ರತಿನಿಧಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾಗಿದ್ದಾರೆ. ಮುಂದಿನ ಎರಡು ವರ್ಷಗಳಿಗೆ ಇವರ ಆಡಳಿತ ಸಮಿತಿಯು ಜನಪರ ಸೇವೆಗಾಗಿ ನಿರತವಾಗಿರುತ್ತದೆ.
ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಕಳೆದ ಒಂದುವರೆ ದಶಕದಿಂದ ಕತಾರಿನಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಅಭಿವೃದ್ಧಿಗೆ ಬೆಳವಣಿಗೆಗೆ ಹಾಗೂ ಕ್ಷೇಮಕ್ಕಾಗಿ ಸತತವಾಗಿ ತಮ್ಮ ಶಕ್ತಿ ಸಮಯ ಹಾಗೂ ತಮಗೆ ಲಭ್ಯವಿರುವ ಸಮಸ್ತ ಸಂಪನ್ಮೂಲಗಳನ್ನು ಮುಡುಪಾಗಿಟ್ಟಿರುತ್ತಾರೆ.
ಇವರ ಸಮಾಜ ಸೇವಾ ಕೆಲಸಗಳಿಗೆ ಶುಭ ಕೋರುತ್ತಾ ಅವರು ಚುನಾವಣೆಯಲ್ಲಿ ಜಯಿಸಿದ್ದಕ್ಕಾಗಿ ಅಭಿನಂದನೆಗಳನ್ನು ತಿಳಿಸುತ್ತೇವೆ.
ಭಾರತೀಯ ಸಂಸ್ಕೃತಿಕ ಕೇಂದ್ರದ ನೂತನ ಆಡಳಿತ ಸಮಿತಿಯ ರಚನೆಗಾಗಿ ನಡೆದ ಚುನಾವಣೆಯಲ್ಲಿ ಸಾವಿರಾರು ಸದಸ್ಯರು ತಮ್ಮ ಮತವನ್ನು ಅಂತರ್ಜಾಲದ ಮುಖೇನ “ಡಿಜಿಪೋಲ್“ ತಂತ್ರಾಂಶದ ಮೂಲಕ ತಮ್ಮ ಮತವನ್ನು ಚಲಾಯಿಸಿದರು. ಚುನಾವಣೆಯಲ್ಲಿ ಕರ್ನಾಟಕದ ಬೈಂದೂರು ಮೂಲದ ಸುಬ್ರಮಣ್ಯ ಹೆಬ್ಬಾಗಿಲು ಅವರು ಸ್ಪರ್ಧಿಸಿದ್ದರು ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಡಿಯಲ್ಲಿ ನೊಂದಾಯಿಸಿಕೊಂಡಿರುವ ಸಂಘಗಳ ಪರವಾಗಿ ಅವರನ್ನು ಆಯ್ಕೆ ಮಾಡಲಾಗಿದೆ. ಎರಡನೇ ಬಾರಿಗೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸುಬ್ರಹ್ಮಣ್ಯ ಅವರು ಜನರ ಸೇವೆಗೆ ಹೆಸರುವಾಸಿಯಾಗಿ ಈ ಸಂಸ್ಥೆಗೆ ಆಯ್ಕೆಯಾಗಿದ್ದಾರೆ.
ಒಂದುವರೆ ದಶಕದಿಂದ ಕತಾರಿನಲ್ಲಿ ಕಾರ್ಯನಿಮಿತ್ತ ನೆಲೆಸಿರುವ ಶ್ರೀ ಸುಬ್ರಮಣ್ಯ ಅವರು ಕಳೆದ ಒಂದು ದಶಕದಿಂದ ತಮ್ಮನ್ನು ತಾವು ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಕರೋನಾ ಮಹಾಮಾರಿ ತಾಂಡವದ ಕಾಲದಲ್ಲಿ ಜನರಿಗೆ ಆಹಾರದ ಸಾಮಗ್ರಿ ಹಾಗೂ ಊಟದ ವ್ಯವಸ್ಥೆ, ಒಂದೇ ಭಾರತ್ ಅಡಿಯಲ್ಲಿ ನೂರಾರು ಭಾರತೀಯರನ್ನು ಮಾತೃಭೂಮಿಗೆ ಹಿಂತಿರುಗಲು ವಿಮಾನ ಸೇವೆ ಕಲ್ಪಿಸಿ ಕೊಡುವುದಕ್ಕೆ ಸಹಾಯ ಮಾಡಿದ್ದಾರೆ.
ಇತರ ಕಾಲದಲ್ಲಿ ರಕ್ತದಾನ ಶಿಬಿರ, ಪರಿಸರ ದಿನಾಚರಣೆಗೆ ಸಸಿ ನೆಡುವ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಹಾಗೂ ಆಯೋಜಿಸುವುದಕ್ಕೆ ಕಾರಣಕರ್ತರಾಗಿರುವುದು ಇವರ ಬಹುಮುಖ್ಯ ಪ್ರತಿಭೆಯ ಕೆಲವು ತುಣುಕುಗಳು.
ಒಂದು ವಿಶೇಷ ಸೇವಾ ಗುಣವನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕಿದೆ. ವಿವಿಧ ಕಾರಣಗಳಿಂದ ದೈವಾಧೀನರಾದ ಭಾರತೀಯರ ಪಾರ್ಥಿವ ಶರೀರವನ್ನು ಕತ್ತರಿನಿಂದ ಮಾತೃಭೂಮಿಗೆ ತ್ವರಿತ ಗತಿಯಲ್ಲಿ ತಲುಪಿಸುವುದರಲ್ಲಿ ಶ್ರೀಯುತರ ಕೊಡುಗೆ ಅಪಾರ. ಕಳೆದ ಆರು ವರ್ಷಗಳಲ್ಲಿ ನೂರಾರು ಇಂತಹ ವೈಕುಂಠ ಸೇವಾ ಕೈಂಕರ್ಯವನ್ನು ನೆರವೇರಿಸಿದ್ದಾರೆ.
ಕರ್ನಾಟಕ ಸಂಘ ಕತಾರ್, ಭಾರತೀಯ ಸಮುದಾಯ ಹಿತೈಷಿ ವೇದಿಕೆ (ಐ.ಸಿ.ಬಿ.ಎಫ್) ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ (ಐ.ಸಿ.ಸಿ) ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಭಾರತೀಯ ದೂತಾವಾಸದ ಅಧಿಕಾರಿಗಳು ಹಾಗೂ ಘನವೆತ್ತ ರಾಯಭಾರಿಗಳು ಇವರ ಸೇವೆಗೆ ಇವರನ್ನು ಮನಃ ಪೂರ್ವಕವಾಗಿ ಅಭಿನಂದಿಸಿದ್ದಾರೆ.
ರಾಯಭಾರಿ ದೀಪಕ್ ಮಿತ್ತಲ್ ಅವರು ಹಾಗೂ ನಿಕಟ ಪೂರ್ವ ರಾಯಭಾರಿಗಳಾಗಿದ್ದ ಕುಮಾರನ್ ಅವರುಗಳು ಸುಬ್ರಮಣ್ಯ ಅವರ ಸೇವೆಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ನೀಡಿದ್ದಾರೆ.
ಹಲವಾರು ಸ್ಥಳೀಯ ಸಂಘ ಸಂಸ್ಥೆಗಳಿಂದ ಇವರನ್ನು ಗೌರವಿಸಿ ಸನ್ಮಾನಿಸಲಾಗಿದೆ.
ಸತತ ಎರಡನೇ ಬಾರಿಗೆ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಭಾರತೀಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿ 2023-2025 ಅವಧಿಗೆ ಆಯ್ಕೆಯಾಗಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳು
ಈ ಚುನಾವಣೆಯಲ್ಲಿ ವಿಜಯೋತ್ಸವ ಆಚರಿಸುತ್ತಾ ಅವರ ನಿಸ್ವಾರ್ಥ, ಪ್ರತಿಫಲ ಅಪೇಕ್ಷೆ ಇಲ್ಲದ, ಅವಿರತ, ಸಮಾಜ ಸೇವೆಗೆ ಮುಂದಿನ ಎರಡು ವರ್ಷಗಳು ಸೇರ್ಪಡೆಯಾಗಿದೆ. ಜನರ ಪ್ರೀತಿ ವಿಶ್ವಾಸ ಬೆಂಬಲ ಸಹಕಾರ ಎಂದಿನಂತೆ ಮುಂದುವರೆಯಲಿ ಹಾಗೂ ದ್ವಿಗುಣಗೊಳ್ಳಲಿ ಎಂದು ಹಾರೈಸೋಣ. ಆ ಭಗವಂತ ಶ್ರೀ ಸುಬ್ರಮಣ್ಯ ಅವರಿಗೆ ಇನ್ನೂ ಹೆಚ್ಚು ಶಕ್ತಿ ನೀಡಿ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ಮುನ್ನಡೆಸಲಿ ಎಂದು ಪ್ರಾರ್ಥಿಸೋಣ ಬನ್ನಿ.
ಜೈ ಹಿಂದ್
Victorious social worker Subramanya Hebbagelu
The election for Indian apex body in Qatar ICC (Indian Cultural Centre) was held through mobile phone digital platform DIGIPOLL in which thousands of ICC members participated and cast their valuable vote. There are hundreds of affiliate organizations (AO) under ICC and each on of these AO representatives have a vote to cast for their representative. Mr. Subramanya Hebbagelu contested in this year ICC election and was elected for representing AOs. This is his consecutive representation of Karnataka state in ICC in the Management committee and shows his eagerness to serve the larger Indian community in the state of Qatar.
Sri Subramanya has been actively involved in community service for the past decade. During the covered waves in Qatar he was instrumental in supporting several members of the Indian community who were deprived off basic necessities such as food and shelter. He used to distribute vegetables and cooked food to hundreds of people every day when the corona was at its peak in Qatar. He was also actively involved in ranging departure flight for Indians in need to return to Motherland during the COVID crisis.
It is worthwhile to mention a specific characteristic of this unique personality. The mortal remains of Indian nationals in Qatar who would have lost their lives due to various reasons are handed over to their respective families in India with minimum hurdles and the contribution of Sri Subramanya Hebbagelu to such noble cause is immense. In the past six years there are hundreds of such cases which has been dealt with.
He has been felicitated by the Indian embassy several times. His Excellency Dr. Deepak Mittal the present ambassador of the Republic of India to the state of Qatar has presented mementos and certificate of recognition to Mr. Subramanya for his community services.
Congratulations to Mr. Subramanya Hebbagelu for being designated as the Vice President of ICC for the period 2023-2025 which is a consecutive term held by a person from Karnataka for the first time.
Being victorious in the current election of 2023 confirms the selfless, perennial social and continued community service of Mr. Subramanya for the next two years. We wish that the affection, support and cordiality of the people continue to flow in exponentially in the days to come in turn boosting the morale of this social worker giving him more strength to serve.
Jai Hind