ಬೆಳಗಾವಿ : ನರೇಂದ್ರ ಮೋದಿಜೀ ಅವರ ನೇತೃತ್ವದ ಭಾರತ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2025-26 ರ ಕೇಂದ್ರ ಬಜೆಟ್ ಆರ್ಥಿಕ ಬೆಳವಣಿಗೆ, ಸಾಮಾಜಿಕ ಕಲ್ಯಾಣ ಮತ್ತು ತಾಂತ್ರಿಕ ಪ್ರಗತಿಗೆ ಮಾರ್ಗಸೂಚಿ ಕೃಷಿ, ಮೂಲಸೌಕರ್ಯ, ತೆರಿಗೆ ಪರಿಹಾರ ಮತ್ತು ಡಿಜಿಟಲ್ ರೂಪಾಂತರಕ್ಕೆ ಬಲವಾದ ಉತ್ತೇಜನದೊಂದಿಗೆ, ರಕ್ಷಣಾ ಆಧುನೀಕರಣ, ಸೈಬರ್ ಭದ್ರತೆ ಮತ್ತು ಬಾಹ್ಯಾಕಾಶ ಪರಿಶೋಧನೆಗೆ ಒತ್ತು ನೀಡಿದೆ. ರೈತರಿಗೆ ಹೆಚ್ಚಿನ ಸಾಲ, ಮಧ್ಯಮ ವರ್ಗದವರಿಗೆ ತೆರಿಗೆ ಕಡಿತ ಒಟ್ಟಾರೆಯಾಗಿ ಇದೊಂದು ದೇಶದ ಅತ್ಯುತ್ತಮ ಜನಪರ ಬಜೆಟ್ ಎಂದು ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ: ಜನಸಾಮಾನ್ಯರು ಎದುರಿಸುವ ಮಾರಣಾಂತಿಕ ಕ್ಯಾನ್ಸರ್ ರೋಗದ 36 ಔಷಧಿ ಹಾಗೂ 6ಜೀವರಕ್ಷಕ ಔಷಧಿಗಳ ಕಸ್ಟಮ್ ತೆರಗೆ ಕಡಿತ, ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ಮತ್ತು ಬ್ಯಾಟರಿ ದರ ಕಡಿತ ಮಾಡುವದರೊಂದಿಗೆ ವಾಹನಸವಾರರಿಗೆ ಹಾಗೂ ಪರಿಸರ ಮಾಲಿನ್ಯವನ್ನು ನಿಯಂತ್ರಣಕ್ಕೆ ಕ್ರಮ. ಜಿಲ್ಲೆಗೊಂದು ಸ್ಟಾರ್ಟಪ್ ಕಛೇರಿ ತೆರೆಯುವ ಮೂಲಕ ಜನಸಾಮಾನ್ಯರ ಅನಕೂಲಕರ ಬಜೆಟ್ ಇದಾಗಿದ್ದು ಜನಪರ ಕಾಳಜಿಗೆ ಕೈಗನ್ನಡಿಯಾಗಿದೆ.
ಸಂಜಯ ಪಾಟೀಲ.
ಮಾಜಿ ಶಾಸಕರು ಬೆಳಗಾವಿ ಗ್ರಾಮೀಣ ಮತಕ್ಷೇತ್ರ