ಬೆಳಗಾವಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಗಾವಿ ನಗರದ ಶಾಲೆಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸಾ.ಶಿ ಇಲಾಖೆ ಉಪನಿರ್ದೇಶಕರು ಜನ ಜೀವಾಳ ಕ್ಕೆ ತಿಳಿಸಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಸೋಮವಾರ ಮುಂಜಾನೆ 8 ರಿಂದ 12 ರ ವರೆಗೆ ಶಾಲೆಗಳನ್ನು ನಡೆಸಲು ಮುಖ್ಯಾಧ್ಯಾಪಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
SSLC ತರಗತಿಯ ಪೂರ್ವಸಿದ್ಧತಾ ಪರೀಕ್ಷೆಗಳು ರಾಜ್ಯಮಟ್ಟದ್ದಾಗಿರುವುದರಿಂದ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದರು.