ಬೆಳಗಾವಿ :
ನಗರದ ಗೋಗಟೆ ವಾಣಿಜ್ಯ ಮಹಾವಿದ್ಯಾಲಯ ಏರ್ಪಡಿಸಿದ್ದ ಹುತಾತ್ಮರ ದಿನಾಚರಣೆಯ ಅಶು ಭಾಷಣ ಸ್ಪರ್ಧೆಯಲ್ಲಿ ಬೆಳಗಾವಿಯ ಕೆಎಲ್ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಮೂರು ಬಹುಮಾನಗಳನ್ನು ಪಡೆದರು.
ಮಲ್ಲಿಕಾರ್ಜುನ ಪೂಜಾರಿ ನಗದು ಬಹುಮಾನದೊಂದಿಗೆ ಪ್ರಥಮ, ಸಮರ್ಥ ಸಾಲಿಮಠ ದ್ವಿತೀಯ ಮತ್ತು ಅವಧೂತ ಗಾಯಡೋಳೆ ನಾಲ್ಕನೇ ಬಹುಮಾನ ಪಡೆದರು. ಕಾರ್ಯಕ್ರಮದಲ್ಲಿ 30 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಕುಲಕರ್ಣಿ, ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ್, ಚರ್ಚಾ ಯೂನಿಯನ್ ವಿಭಾಗದ ಸಮನ್ವಯಕಾರ
ಪ್ರೊ.ಎಂ.ಎಸ್.ಕುಲಕರ್ಣಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಬಹುಮಾನ ವಿಜೇತರನ್ನು ಅಭಿನಂದಿಸಿದ್ದಾರೆ.