
ಬೆಳಗಾವಿ: ವಿವಿಧ ಸಾಮಾಜಿಕ ಸಮಸ್ಯೆಗಳ ಅಧ್ಯಯನ ನಡೆಸಲು ನಗರದ ಲಿಂಗರಾಜ ಪದವಿಪೂರ್ವ ಮಹಾವಿದ್ಯಾಲಯದ ಸುಮಾರು 95 ವಿದ್ಯಾರ್ಥಿಗಳು ಕಣಬರಗಿಯ ಮಹೇಶ ಫೌಂಡೇಶನ್ ಗೆ ಭೇಟಿ ನೀಡಿದರು.
ಮಹೇಶ್ ಪೌಂಡೇಶನ್ ಸಂಸ್ಥಾಪಕ ಮಹೇಶ ಜಾಧವ ಅವರು ವಿದ್ಯಾರ್ಥಿಗಳು ಹದಿಹರೆಯದಲ್ಲಿ ಕೈಗೊಳ್ಳಬೇಕಾದ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿದರು. ಗಾಂಜಾ, ಅಫೀಮು ಮುಂತಾದ ದುಷ್ಚಟಗಳಿಂದ ದೂರವಿರಬೇಕು. ಎಚ್ಐವಿಯಂತಹ ಮಾರಕ ರೋಗಗಳ ಬಗ್ಗೆ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಲಿಂಗರಾಜ ಕಾಲೇಜು ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಸುಶ್ಮಿತಾ ಪೂಜಾರ, ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರಶಾಂತ ಕೊಣ್ಣೂರ, ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ದೀಪಾವಳಿ ಸಕ್ರಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ತೆರಳಿದ್ದರು.


