ಬೆಳಗಾವಿ: ವಿದ್ಯಾರ್ಥಿಗಳು ಮೊಬೈಲ್ ಆಟ ನಿಲ್ಲಿಸಿ ಮೈದಾನಕ್ಕೆ ಇಳಿದು ಆಟೋಟಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಬೇಕು ಎಂದು ಡಾ. ತನ್ಮಯ್ ಮೆಟಗುಡ್ ಸಲಹೆ ನೀಡಿದರು.
ನಗರದ ಲವ್ ಡೇಲ್ ಸೆಂಟ್ರಲ್ ಶಾಲೆಯಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.
ಪ್ರಾಚಾರ್ಯೆ ಲಕ್ಷ್ಮೀ ಇಂಚಲ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಸ್ಪೂರ್ತಿಯಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು. ಡಾ. ಸಿ.ಎನ್. ನಾಯ್ಕರ್ ಉಪಸ್ಥಿತರಿದ್ದರು. ಕ್ರೀಡಾ ಶಿಕ್ಷಕ ಬಸಲಿಂಗಪ್ಪ ಅಗಸಗಿ ಮತ್ತು ಕಲ್ಮೇಶ ಮಾರ್ಗದರ್ಶನ ನೀಡಿದ್ದರು. ಶಾಲೆಯ ಪಬ್ಲಿಕ್ ರಿಲೇಶನ್ ಅಧಿಕಾರಿ ವೀರಣ್ಣ ಕಡಾಡಿ, ಕುಮಾರ ನಾರಿ ಹಾಗೂ ಸಿಬ್ಬಂದಿ, ಪಾಲಕರು ಉಪಸ್ಥಿತರಿದ್ದರು.