ಬೆಳಗಾವಿ ಜನ ಜೀವಾಳ ಜಾಲ: ನೈಜ ಇತಿಹಾಸ ಕಟ್ಟಿಕೊಡುವ ಕೃತಿಗಳ ರಚನೆಯಾಗಬೇಕು. ಸಾಹಿತಿಗಳ ದ್ವಂದ ನಿಲುವುಗಳಿಂದ ದೇಶ ಸಮಸ್ಯೆ ಎದುರಿಸುತ್ತದೆ. ಸಾಹಿತಿಗಳಲ್ಲಿ ಎಡ ಬಲ ಪಂಗಡಗಳಿದ್ದು ನೈಜ ಇತಿಹಾಸ ಕಟ್ಟಿಕೊಡುವ ಪ್ರಯತ್ನ ಆಗಬೇಕು.
ಬಸವಣ್ಣ ಅಂಬೇಡ್ಕರ್ ಶಿವಾಜಿ ಮುಂತಾದ ನಾಯಕರು ಒಂದೊಂದು ಜಾತಿ ಕೋಮುಗಳಿಗೆ ಮೀಸಲಾಗಿರುವುದು ಅತ್ಯಂತ ಖೇದದ ಸಂಗತಿ ಎಂದು ಲೋಕೋಪಯೋಗಿ ಸಚಿವ ಡಾ. ಸತೀಶ ಜಾರಕಿಹೊಳಿ ಹೇಳಿದರು.
ಅವರು ಇಂದು ನಗರದ ಕನ್ನಡ ಭವನದಲ್ಲಿ ಹಿರಿಯ ಸಾಹಿತಿ, ಪತ್ರಕರ್ತ ಡಾ. ಸರಜೂ ಕಾಟ್ಕರ ಅವರ ಛತ್ರಪತಿ ಶಿವಾಜಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ, ಶಿವಾಜಿ ಸೈನ್ಯದಲ್ಲಿ ಹೆಚ್ಚಿನ ಪ್ರಮುಖ ಹುದ್ದೆಯಲ್ಲಿ ಮುಸ್ಲಿಮರೆ ಆಗಿದ್ದರು. ಶಿವಾಜಿಯವರು ಮುಸ್ಲಿಂರೊಂದಿಗೆ ಮಾತ್ರ ಹೋರಾಟ ಮಾಡಲಿಲ್ಲ. ಬ್ರಿಟಿಷ್ ರೊಂದಿಗೆ ಡಚ್ಚರೊಂದಿಗೆ ಪೋರ್ಚುಗೀಸ್ ರೊಂದಿಗೆ ಇತರರೊಂದಿಗೆ ಹೋರಾಡಿದರು. ಪುಲೆಯವರು ಅವರ ಸಮಾಧಿ ಹುಡುಕಿ
ಮಹದುಪಕಾರ ಮಾಡಿದರು.
ಕೃತಿಕಾರ ಡಾ.ಸರಜೂ ಕಾಟ್ಕರ ಕೃತಿ ರಚನೆ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಡಾ.ಮನು ಬಳಿಗಾರ ವಹಿಸಿದ್ದರು. ಡಾ. ಗುರುದೇವಿ ಹುಲೆಪ್ಪನವರಮಠ, ಯ.ರು. ಪಾಟೀಲ ಕೃತಿ ಪರಿಚಯ ಮಾಡಿದರು.ಡಾ.ರಾಮಕೃಷ್ಣ ಮರಾಠೆ ಸ್ವಾಗತಿದರು. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು. ಪತ್ನಿ ಸುಮಾ ಕಾಟ್ಕರ ವಂದಿಸಿದರು.