ಪೊಲೀಸರ ಉಪಸ್ಥಿತಿಯಲ್ಲೆ ಕಡೋಲಿಯಲ್ಲಿ ಮಾರಾಮಾರಿ..!
ಘಟನೆ ಹಿಂದಿದೆ.ಗ್ರಾಪಂ ಸದಸ್ಯರ ಕುತಂತ್ರ, ಪೊಲೀಸಪ್ಪನ ಪ್ಲ್ಯಾನ್ ..?
ಹಳ್ಳ ಹಡಿಯಿತಾ ಕಾಕತಿ ಪೊಲೀಸರ ಕಾನೂನು ಸುವ್ಯವಸ್ಥೆ ..?
ಬೆಳಗಾವಿ : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕಡೋಲಿ ಗ್ರಾಮದಲ್ಲಿ ಕಾಕತಿ ಪೊಲೀಸರ ಉಪಸ್ಥಿತಿಯಲ್ಲೇ ಎರಡು ಮುಸ್ಲಿಂ ಸಮುದಾಯದ ನಡುವೆ ಕಲ್ಲು ತೂರಾಟ ನಡೆದಿದ್ದು, ಪೊಲೀಸರ ಕಾನೂನು ಸುವ್ಯವಸ್ಥೆ ಹಾಳಾಗಿ ಪರಿಸ್ಥಿತಿ ಹದಿಗೆಟ್ಟು ಹಳ್ಳ ಹಿಡಿದಂತಾಗಿದೆ.
ಏನಿದು ಘಟನೆ ..?
ಮಕಾಂದರ್ ದರ್ಗಾದಲ್ಲಿ ಪೂಜೆ ಮಾಡುವ ಮುಸ್ಲಿಂ ಕುಟುಂಬ ಕಾನೂನುಬದ್ಧವಾಗಿ ಈ ಜಮೀನು ಆಸ್ತಿಯನ್ನು ಹೊಂದಿದ್ದಾರೆ
ಆದರೆ, ಗ್ರಾಮದ ಇನ್ನೊಂದು ಮುಸ್ಲಿಂ ಸಮುದಾಯದವರು ಅಲ್ಲಿನ ಸ್ಥಳಿಯ ರಾಜಕಾರಣಿಗಳ ಕುಮ್ಮಕ್ಕಿನಿಂದ ಈ ಆಸ್ತಿ ತಮಗೆ ಸೇರಿದ್ದಲ್ಲ ಎಂದು ಪ್ರತಿಪಾದಿಸಿ ಮನೆ ನಿರ್ಮಿಸಿಕೊಳ್ಳಲು ನಿರ್ಬಂಧ ವಿಧಿಸಿದ್ದಾರೆ. ಆದಾಗ್ಯೂ, ಮಕಾಂದರ್ ಕುಟುಂಬವು ದಶಕಗಳಿಂದ ದಾಖಲೆಗಳ ಪ್ರಕಾರ ಆಸ್ತಿಯನ್ನು ಹೊಂದಿದ್ದು ಕಾನೂನಿನ ಚೌಕಟ್ಟಿನಲ್ಲಿ ಅನುಮತಿ ಪಡೆದು ಮನೆ ನಿರ್ಮಾಣ ಮಾಡುತ್ತಿರುವುದಾಗಿ ತಿಳಿದು ಬಂದಿದೆ.
ಇದಲ್ಲದೇ, ಎರಡು ವಾರಗಳ ಹಿಂದೆ ಕಾಕತಿ ಪೊಲೀಸ್ ಠಾಣೆಯಲ್ಲಿ ಹಿಂಸಾಚಾರ ಮತ್ತು ನಿರ್ಮಾಣ ಹಂತದಲ್ಲಿರುವ ಮನೆಯನ್ನು ಕೆಡವಿದ ಬಗ್ಗೆ ಎರಡೂ ಕಡೆಯವರ ನಡುವೆ ದೂರುಗಳು ಮತ್ತು ಪ್ರತಿ ದೂರುಗಳು ದಾಖಲಾಗಿದ್ದವು. ಇಷ್ಟಾದರೂ ಕಾಕತಿ ಪೊಲೀಸರು ಮಾತ್ರ ಕಡೋಲಿಯ ಕೆಲವು ಗ್ರಾಮ ಪಂಚಾಯಿತಿ ಸದಸ್ಯರನ್ನು ನಂಬಿ ಅವರೊಂದಿಗೆ ಕೈಮಿಲಾಯಿಸಿ ಬೆಳಗಾವಿ ಪೊಲೀಸ್ ಇಲಾಖೆಯ ಹೆಸರನ್ನು ಕಡೋಲಿ ಗ್ರಾಮಸ್ಥರಿಂದ ದೂರುವಂತೆ ಮಾಡಿದ್ದಾರೆ.
ಮತಕ್ಕಾಗಿ ಕುತಂತ್ರ….? ಓಲೈಕೆಗಾಗಿ ಸರ್ಕಾರಿ ಅಧಿಕಾರ ದುರ್ಬಳಕೆ..?
ವೋಟ್ ಬ್ಯಾಂಕ್ ಗಾಗಿ ಗ್ರಾಮ ಪಂಚಾಯಿತಿಯ ಕೆಲ ಸದಸ್ಯರು ಪೊಲೀಸರನ್ನು ದಾರಿ ತಪ್ಪಿಸಿದ್ದರೇ, ಮತ್ತೊಂದು ಕಡೆ ಅಲ್ಲಿನ ಪೊಲೀಸಪ್ಪ ಮುಖಂಡರನ್ನು ಓಲೈಕೆಗಾಗಿ ಇನ್ನೊಂದು ಮುಸ್ಲಿಂ ಸಮುದಾಯಕ್ಕೆ ಬೆಂಬಲ ನೀಡಿ ತನ್ನ ಠಾಣೆಯ ಪೊಲೀಸರ ಉಪಸ್ಥಿತಿಯಲ್ಲಿ ಕಲ್ಲು ತೂರಾಟ ನಡೆಸಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕುವಂತೆ ಮಾಡಿದೆ.
ಗ್ರಾಪಂ ಸದಸ್ಯರ ಕುತಂತ್ರ ಹಾಗೂ ಆ ಪೊಲೀಸಪ್ಪನ ಪ್ಲ್ಯಾನ್ ನಿಂದಾಗಿ ಈ ಘಟನೆ ನದೆದಿರುವುದಾಗಿ ಪಕ್ಕಾ ಮೂಲಗಳಿಂದ ತಿಳಿದು ಬಂದಿದೆ.
ಆ ಪೊಲೀಸಪ್ಪನೇ ಈ ಘಟನೆ ಸೃಷ್ಟಿಸಿ, ಮತ್ತೇರಡು ಪ್ರಕರಣಗಳನ್ನು ದಾಖಲಿಸಿ ಹೇಗಾದರೂ ಮಾಡಿ ಮನೆ ನಿರ್ಮಾಣವನ್ನು ನಿಲ್ಲಿಸಿ ಆ ರಜಕಾರಣಿಯಿಂದ ಭೇಷ ಎನಿಸಿಕೊಳ್ಳುವುದಕ್ಕಾಗಿ ಮಂದಾಗಿರುವುದಾಗಿ ಕಡೋಲಿ ಊರಿನಲ್ಲಿ ಜಗಜ್ಜಾಹಿರಾಗಿದೆ.
ಪೊಲೀಸರ ಪ್ಲ್ಯಾನ್ ಹಾಗೂ ನಿರ್ಲಕ್ಷ್ಯದಿಂದ ಕಡೋಲಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಗಾಯಗೊಂಡವರು ಆಸ್ಪತ್ರೆ ಸೇರಿ ಇನ್ನೂಳಿದ ಮಸ್ಲಿಂ ಸಮುದಾಯದವರು ಕಾಕತಿ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋಗಿದ್ದಾಗಿ ತಿಳಿದು ಬಂದಿದೆ.