ಜನ ಜೀವಾಳ ಜಾಲ: ಬೆಳಗಾವಿ : ಬೆಳಗಾವಿಯ ಕೆ.ಎಲ್.ಇ ಯ ತಾಯಿಬೇರು ಜಿ.ಎ. ಪ್ರೌಢಶಾಲೆಯ ವಿದ್ಯಾರ್ಥಿನಿ ಗೌರಿ ಪೂಜಾರಿ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯದ ಮೂರನೇ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದ 400 ಮೀ.,600ಮೀ ಓಟದಲ್ಲಿ ಬಾಲಕಿಯರ ವಿಭಾಗದಲ್ಲಿ ಬಂಗಾರದ ಪದಕ ಗೆದ್ದುಕೊಂಡು ಸಾಧನೆ ಮಾಡಿದ್ದಾಳೆ. ಈ ಮೂಲಕ ಕೆ.ಎಲ್.ಇ ಅಂಗಳದಲ್ಲಿ ಉದಯೋನ್ಮುಖ ಕ್ರೀಡಾಳು ಕಂಗೊಳಿಸಿದಂತಾಗಿದೆ.
ಬೆಳಗಾವಿಯ ಪ್ರತಿಷ್ಠಿತ ಕೆಎಲ್ ಇ ಸಂಸ್ಥೆಯ ಜಿಎ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಗೌರಿ ಈ ಅಪರೂಪದ ಸಾಧನೆಯಿಂದ ಕೆಎಲ್ ಇ ಮುಡಿಗೆ ಮತ್ತೊಂದು ಕ್ರೀಡಾ ಮುಕುಟ ಮಣಿ ದೊರಕಿದಂತಾಗಿದೆ. ವಿದ್ಯಾರ್ಥಿನಿಯ ಸಾಧನೆಗೆ ಕೆಎಲ್ ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರು ಹಾಗೂ ನಿರ್ದೇಶಕರು ಅಪಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೂಟದ ಐದನೇ ದಿನವಾದ ಸೋಮವಾರ ಬಾಲಕಿಯರ ವಿಭಾಗದಲ್ಲಿ ಗೌರಿ 1:016 ಸೆಕೆಂಡ್ಗಳಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರೆ, ಬಾಗಲಕೋಟೆಯ ಪ್ರಥ್ವಿ ಧರೆಪ್ಪ ಬ್ಯಾಕೋಡ (1:01.6 ಸೆ.) ಮತ್ತು ರಾಮನಗರದ ದಿವ್ಯಾ ಎನ್. (1:03.3 ಸೆ.) ಕ್ರಮವಾಗಿ 2 ಮತ್ತು 3ನೇ ಸ್ಥಾನ ಗಳಿಸಿದರು.
ಗೌರಿ ಪೂಜಾರಿ ಮೊದಲಿನಿಂದಲೂ ಆಟೋಟ ಸ್ಪರ್ಧೆಯಲ್ಲಿ ಅಪ್ರತಿಮ ಸಾಧನೆ ಮಾಡುತ್ತಾ ಬಂದಿದ್ದಾಳೆ. ಇದೀಗ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡುವ ಮೂಲಕ ತನ್ನಲ್ಲಿರುವ ಪ್ರತಿಭೆಯನ್ನು ಸಾಬೀತುಪಡಿಸಿದ್ದಾಳೆ. ಬೆಳಗಾವಿಯ ಪ್ರತಿಷ್ಠಿತ ಕೆಎಲ್ ಇ ಸಂಸ್ಥೆಯ ಜಿಎ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಗೌರಿ ಈ ಅಪರೂಪದ ಸಾಧನೆಯಿಂದ ಕೆಎಲ್ ಇ ಮುಡಿಗೆ ಮತ್ತೊಂದು ಕ್ರೀಡಾ ಮುಕುಟ ಮಣಿ ದೊರಕಿದಂತಾಗಿದೆ.
ವಿದ್ಯಾರ್ಥಿನಿಯ ಸಾಧನೆಗೆ ಆಜೀವ ಸದಸ್ಯ ಮಹಾದೇವ ಬಳಿಗಾರ, ಉಪ ಪ್ರಾಚಾರ್ಯ ಸಿ.ಪಿ. ದೇವಋಷಿ, ಹಾಗೂ ಕ್ರೀಡಾ ವಿಭಾಗದ ಮುಖ್ಯಸ್ಥ ಹನಮಂತ ವೀರಗಂಟಿ, ಸದಸ್ಯ ಶಿವರಾಯ ಏಳುಕೋಟಿ ಹಾಗೂ ಶಿಕ್ಷಕ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.