ಬೆಳಗಾವಿ:
ಕೆಎಲ್ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಬೆಂಬಳಗಿ ರೋಲಿಂಗ್ ಶೀಲ್ಡ್ಗಾಗಿ ಮಲ್ಟಿಪಾರ್ಟಿ ಸಿಸ್ಟಂ ಇಂಗ್ಲಿಷ್ ಡಿಬೇಟ್ ಮತ್ತು ಕನ್ನಡದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ವಿಷಯದ ಕುರಿತು ರಾಜ್ಯಮಟ್ಟದ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ನ್ಯಾಯವಾದಿ ಹಾಗೂ ಅರ್.ಎಲ್ ಕಾನೂನು ಕಾಲೇಜಿನ ಚೇರಮನ್ ಎಂ.ಆರ್.ಕುಲಕರ್ಣಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸ್ಪರ್ಧೆಯೇ ನಿಮ್ಮ ಜೀವನ ಕ್ರಮವಾಗಬೇಕು. ಆರೋಗ್ಯಕರ ಸ್ಪರ್ಧೆ ಇರಬೇಕು
ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಜಲಿ ಮತ್ತು ಬೆಂಬಳಗಿ ಚರ್ಚಾಸ್ಪರ್ಧೆ 83 ವರ್ಷಗಳ ಹಿಂದಿನ ಚರ್ಚಾ ಸ್ಪರ್ಧೆಯಾಗಿದ್ದು, ಇಡೀ ಕರ್ನಾಟಕದಲ್ಲಿಯೇ ಮೊದಲ ಚರ್ಚಾ ಸ್ಪರ್ಧೆಯಾಗಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ 30 ತಂಡಗಳು ಭಾಗವಹಿಸಿವೆ ಎಂದು ಹೇಳಿದರು.
ಚರ್ಚಾ ಒಕ್ಕೂಟದ ಅಧ್ಯಕ್ಷೆ, ಪ್ರಾಧ್ಯಾಪಕಿ ಮಾಧುರಿ ಕುಲಕರ್ಣಿ ಸ್ವಾಗತಿಸಿ ಕಾಲೇಜಿನ ಇತಿಹಾಸ ಮತ್ತು ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು
ಬೆಂಬಳಗಿ ಶೀಲ್ಡ್ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಚಿನ್ಮಯಿ 5000/-, ಚೈತ್ರಾ ಎಸ್. ಪಾಟೀಲ್ 3000/-, ಮತ್ತು ಅನಿಲ್ ಎಸ್. 2000/- ಪಡೆದರು. ಬೆಂಬಳಗಿ ರೋಲಿಂಗ್ ಶೀಲ್ಡ್ ಅನ್ನು ಆರ್ವಿ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಬೆಂಗಳೂರು ಗೆದ್ದಿದೆ.
ಮಜಳಿ ಶೀಲ್ಡ್ ಇಂಗ್ಲಿಷ್ ಚರ್ಚಾ ಸ್ಪರ್ಧೆ ವಿಜಯಲಕ್ಷ್ಮಿ ರಜಪೂತ 5000/-, ಶ್ರದ್ಧಾ ಎಚ್. 3000/-, ಸ್ವಾತಿ ಕುಗೆ 2000/- ಪಡೆದರು. ಮಜಳಿ ರೋಲಿಂಗ್ ಶೀಲ್ಡ್ ಅನ್ನು ಲಿಂಗರಾಜ್ ಪಿಯು ಕಾಲೇಜು ಬೆಳಗಾವಿ ಪಡೆಯಿತು.
ಕಾಲೇಜಿನ ಡಿಬೇಟಿಂಗ್ ಯೂನಿಯನ್ ವಿಭಾಗದ ವತಿಯಿಂದ ನಡೆದ ಸಮಾರಂಭದಲ್ಲಿ ಉಜ್ವಲಾ ಹವಾಲ್ದಾರ್ ಸ್ಪರ್ಧೆಯ ನಿಯಮಗಳ ಕುರಿತು ಮಾಹಿತಿ ನೀಡಿದರು, ತನ್ಮಯೀ ಪ್ರಾರ್ಥಿಸಿದರು. ಕ್ಷಮಾ ಭಟ್ ವಂದಿಸಿದರು.