ಬೆಳಗಾವಿ :
ಬೆಳಗಾವಿ ಮತ್ತು ಚಿಕ್ಕೊಡಿ ವಿಭಾಗಗಳಿಂದ ಜಂಟಿಯಾಗಿ ಬೆಳಗಾವಿ ಮತ್ತು ಗೋಕಾಕ ನಡುವೆ ಅಂಕಲಗಿ ಒಂದು ನಿಲುಗಡೆ ಕಲ್ಪಿಸಿ, ಪ್ರತಿ ದಿನ ಒಟ್ಟು 25 ದುಂಡು
ಸುತ್ತುಗಳಿಂದ ಪ್ರತಿ 15 ರಿಂದ 3೦ ನಿಮೀಷಗಳ ಅಂತರದಲ್ಲಿ ವಿಶೇಷವಾಗಿ ಏಕವ್ಯಕ್ತಿ ಸಾರಿಗೆ
ಕಾರ್ಯಾಚರಣೆಯನ್ನು ಮೇ 1 ರಿಂದ ಪ್ರಾರಂಭಿಸಲಾಗುತ್ತಿದೆ.
ಸಾರ್ವಜನಿಕ ಪ್ರಯಾಣಿಕರು ಸದರಿ ಸಾರಿಗೆಗಳ ಪ್ರಯೋಜನ ಪಡೆದುಕೊಳ್ಳಲು ವಾಕರಸಾ ಸಂಸ್ಥೆ
ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ ರಾಠೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.