ಬೆಂಗಳೂರು : 2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ.
ಈ ಬಾರಿ ಫಲಿತಾಂಶ ಶೇ.62.34ರಷ್ಟಾಗಿದೆ. ಇದು ಕಳೆದ ವರ್ಷಕ್ಕಿಂತ 8% ಹೆಚ್ಚಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ (ಶೇ.91.12), ಉಡುಪಿ ಜಿಲ್ಲೆ 2ನೇ ಸ್ಥಾನ (ಶೇ.89.96), ಉತ್ತರ ಕನ್ನಡ ಜಿಲ್ಲೆಗೆ 3ನೇ ಸ್ಥಾನ (ಶೇ.83.19), ಶಿವಮೊಗ್ಗ ಐದನೇ ಸ್ಥಾನದಲ್ಲಿದೆ.
625ಕ್ಕೆ 625 ಅಂಕ ಪಡೆದವರು
ಎಂ.ಧನಲಕ್ಷ್ಮೀ -ಸೇಂಟ್ಯಶ್ಶಾಲೆ, ಬೆಂಗಳೂರು ಉತ್ತರ
ಎಸ್.ಎನ್.ಜಾಹ್ನವಿ – ವಿಜಯಭಾರತಿ ವಿದ್ಯಾಲಯ, ಬೆಂಗಳೂರು ದಕ್ಷಿಣ
ಮಧುಸೂಧನ್ ರಾಜ್ -ಎಂಇಎಸ್ಕಿಶೋರ ಕೇಂದ್ರ, ಬೆಂಗಳೂರು ಉತ್ತರ
ಅಖೀಲ್ ಅಹ್ಮದ್ ನದಾಫ್-ಆಕ್ಸ್ಫರ್ಡ್ ಶಾಲೆ, ವಿಜಯಪುರ
ಭಾವನಾ -ನೀಲಗಿರೇಶ್ವರ ವಿದ್ಯಾನಿಕೇತನ ಶಾಲೆ, ದೇವನಹಳ್ಳಿ
ಎಸ್.ಧನುಷ್ -ಮರಿಮಲ್ಲಪ್ಪ ಹೈಸ್ಕೂಲ್, ಮೈಸೂರು ಜಿಲ್ಲೆ
ಜೆ.ಧೃತಿ -ಸಾಹುಕಾರ್ಚಿಕ್ಕನಗೌಡ ಶಾಲೆ, K.R.ಪೇಟೆ, ಮಂಡ್ಯ
ಮೊಹಮ್ಮದ್ ಮಸ್ತೂರ್ -ಚೇತನ ವಿದ್ಯಾಮಂದಿರ, ತುಮಕೂರು
ಮೌಲ್ಯ ಡಿ. ರಾಜ್ -ರಾಷ್ಟ್ರೀಯ ಅಕಾಡೆಮಿ ಶಾಲೆ, ಚಿತ್ರದುರ್ಗ
ಕೆ.ನಮನ – ಪ್ರಿಯದರ್ಶಿನಿ ಹೈಸ್ಕೂಲ್, ಶಿವಮೊಗ್ಗ ಜಿಲ್ಲೆ
ನಮಿತಾ -ಮಾತಾ ನ್ಯಾಷನಲ್ ಇಂಗ್ಲಿಷ್ಶಾಲೆ, ಬೆಂಗಳೂರು ದಕ್ಷಿಣ
ನಂದನ್ -ರಾಷ್ಟ್ರೀಯ ಅಕಾಡೆಮಿ ಇಂಗ್ಲಿಷ್ ಶಾಲೆ, ಚಿತ್ರದುರ್ಗ
ನಿತ್ಯ ಎಂ.ಕುಲಕರ್ಣಿ -ರಾಮಕೃಷ್ಣ ಇಂಗ್ಲಿಷ್ಶಾಲೆ, ಶಿವಮೊಗ್ಗ
ರಂಜಿತಾ -ಚಂದ್ರಶೇಖರನಾಥ ಸ್ವಾಮೀಜಿ ಶಾಲೆ, ಬೆಂಗಳೂರು ಗ್ರಾಮಾಂತರ
ರೂಪಾ ಪಾಟೀಲ್-ಸರ್ಕಾರಿ ಕಾಂಪೋಸಿಟ್ಪಿಯು ಕಾಲೇಜು, ದೇವಲಾಪುರ, ಬೈಲಹೊಂಗಲ, ಬೆಳಗಾವಿ
ಸಹಿಷ್ಣು ಎನ್ – ಆದಿಚುಂಚನಗಿರಿ ಹೈಸ್ಕೂಲ್, ಶಿವಮೊಗ್ಗ ಜಿಲ್ಲೆ
ಶಗುಫ್ತಾ ಅಂಜುಮ್ -ಸರ್ಕಾರಿ ಕಾಂಪೋಸಿಟ್ಉರ್ದು ಶಾಲೆ, ಶಿರಸಿ
ಸ್ವಸ್ತಿ ಕಾಮತ್ -ಕಾರ್ಕಳ ಜ್ಞಾನಸುಧಾ ಇಂಗ್ಲಿಷ್ ಶಾಲೆ, ಉಡುಪಿ
ಆರ್.ಎನ್.ತಾನ್ಯಾ – ಬಿಕೆ,ಎಸ್ವಿಬಿ ಶಾಲೆ, ವಿಜಯನಗರ, ಮೈಸೂರು
ಉತ್ಸವ ಪಟೇಲ್ -ವಿಜಯ ಸ್ಕೂಲ್, ಚಿಕ್ಕಹೊನ್ನೇನಹಳ್ಳಿ, ಹಾಸನ
ಯಶ್ವಿತಾ ರೆಡ್ಡಿ -ಚಿರೆಕ್ಪಬ್ಲಿಕ್ಸ್ಕೂಲ್, ಮಧುಗಿರಿ, ತುಮಕೂರು
ಯುಕ್ತಾ ಎಸ್ -ಹೋಲಿ ಚೈಲ್ಡ್ಇಂಗ್ಲಿಷ್ಶಾಲೆ, ಬೆಂಗಳೂರು ಉತ್ತರ
ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ ; ನಿರಾಶೆಗೊಳಗಾಗಬೇಡಿ, ಇನ ಅವಕಾಶ ಇದೆ
ಬೆಂಗಳೂರು: ಕರ್ನಾಟಕದ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ (SSLC result 2025) ಪ್ರಕಟವಾಗಿದ್ದು, ರಾಜ್ಯದಲ್ಲಿ ಈ ಬಾರಿ 66.14%ರಷ್ಟು ಫಲಿತಾಂಶ ಬಂದಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ನಡೆಸಿ ಇದರ ಫಲಿತಾಂಶದ ವಿವರಗಳನ್ನು ನೀಡಿದ್ದಾರೆ.ಫಲಿತಾಂಶ ಕಳೆದ ವರ್ಷಕ್ಕಿಂತ ಶೇ.8ರಷ್ಟು ಹೆಚ್ಚಾಗಿದೆ. 22 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, 625 ಅಂಕಗಳಲ್ಲಿ 625 ಅಂಕ ಪಡೆದಿದ್ದಾರೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ (ಶೇ.91.12) ಪ್ರಥಮ, ಉಡುಪಿ (ಶೇ. 89.96) ದ್ವಿತೀಯ ಹಾಗೂ ಉತ್ತರ ಕನ್ನಡ (83.19) ತೃತೀಯ ಸ್ಥಾನ ಪಡೆದಿದೆ. ಶಿವಮೊಗ್ಗ ಜಿಲ್ಲೆ ಮೊದಲ ನಾಲ್ಕು ಸ್ಥಾನ ಪಡೆದಿದೆ. ಶೇ. 42.43 ಫಲಿತಾಂಶದೊಂದಿಗೆ ಕಲಬುರಗಿ ಕೊನೆಯ ಸ್ಥಾನದಲ್ಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ.
ರಾಜ್ಯದ 2818 ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್ 21ರಿಂದ ಏಪ್ರಿಲ್ 4 ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿತ್ತು. ಒಟ್ಟು 4,61,563 ಬಾಲಕರು ಮತ್ತು 4,34,884 ಬಾಲಕಿಯರು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಿರುವ ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು ಫಲಿತಾಂಶ ಪ್ರಕಟಿಸಿದೆ. ಮಧ್ಯಾಹ್ನ 12:30ಕ್ಕೆ ಕೆಎಸ್ಇಎಬಿ ವೆಬ್ಸೈಟ್ನಲ್ಲಿ ರಿಸಲ್ಟ್ ಲಭ್ಯವಾಗಲಿದೆ.
ಫಲಿತಾಂಶ ವೀಕ್ಷಿಸುವುದು ಹೇಗೆ?
ಫಲಿತಾಂಶಕ್ಕಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ https://karresults.nic.in/ ನಲ್ಲಿ ಭೇಟಿ ನೀಡಿ.
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ 2025 ಲಿಂಕ್ ಆಯ್ಕೆ ಮಾಡಿಕೊಳ್ಳಬೇಕು.
ಪರೀಕ್ಷಾ ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಸೇರಿ ಅಗತ್ಯ ಮಾಹಿತಿ ದಾಖಲಿಸಬೇಕು.
ಅಂಕಪಟ್ಟಿ ತೆರೆದುಕೊಳ್ಳಲಿದ್ದು, ಡೌನ್ಲೋಡ್ ಮಾಡಿಕೊಳ್ಳಬಹುದು.
ಶುಕ್ರವಾರ ಮಧ್ಯಾಹ್ನ 12:30ರ ನಂತರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದಾಗಿದೆ. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೂ ಈ ವರ್ಷ ಇನ್ನೆರಡು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ. ಉತ್ತೀರ್ಣರಾಗದಿದ್ದರೆ ಅಥವಾ ಉತ್ತಮ ಅಂಕ ಲಭಿಸದಿದ್ದರೆ ವಿದ್ಯಾರ್ಥಿಗಳು ಇನ್ನೂ ಎರಡು ಬಾರಿ ಪರೀಕ್ಷೆ ಬರೆಯಬಹುದಾಗಿದೆ.
ವೈದ್ಯೆಯಾಗುವೆ..
625 ಕ್ಕೆ 625 ಅಂಕ ಗಳಿಸಿರುವ ಬೈಲಹೊಂಗಲ ದೇವಲಾಪುರದ ವಿದ್ಯಾರ್ಥಿನಿ ರೂಪಾ ಪಾಟೀಲ ಅವರಿಗೆ ವೈದ್ಯರಾಗುವ ಹಂಬಲ ಇದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ನಾನು ಶಾಲೆಯ ಅವಧಿ ಬಿಟ್ಟು ದಿನವೂ 8 ಗಂಟೆ ಅಭ್ಯಾಸ ಮಾಡುತ್ತಿದ್ದೆ. ದಿನಕ್ಕೆ 5-6 ಗಂಟೆ ಓದುತ್ತಿದ್ದೆ. ಶಿಕ್ಷಕರ ಪ್ರೋತ್ಸಾಹ ಸಾಕಷ್ಟಿತ್ತು. ಅಪ್ಪ-ಅಮ್ಮ ನನಗೆ ಓದಲು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ಕಂಠಪಾಠಕ್ಕಿಂತ ಅರ್ಥ ಮಾಡಿಕೊಂಡು ಓದಿದರೆ ನೆನಪಿನಲ್ಲಿ ಇಟ್ಟುಕೊಳ್ಳುವುದು ಸುಲಭವಾಗುತ್ತದೆ. ಇನ್ನು ಮುಂದೆ ವೈದ್ಯೆಯಾಗುವ ಗುರಿ ಇಟ್ಟುಕೊಂಡಿದ್ದೇನೆ. ಅಪ್ಪ-ಅಮ್ಮ ಸೇರಿ ಅಜ್ಜಿ ಮನೆಯವರಿಗೆಲ್ಲ ತುಂಬಾ ಖುಷಿಯಾಗಿದೆ ಎಂದರು.