ಅಥಣಿ :
ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರ ತಂದೆ ದುಂಡಪ್ಪ ಅದೃಶ್ಯಪ್ಪ ಗೌರಗೊಂಡ ಇಂದು ನಿಧನರಾದರು.
ಅಥಣಿ ತಾಲೂಕು ತಾಂವಶಿ ಗ್ರಾಮದವರಾದ ಅವರ ಅಂತ್ಯಕ್ರಿಯೆ ಇಂದು ಸ್ವಗ್ರಾಮದಲ್ಲಿ ಸಂಜೆ ನೆರವೇರಲಿದೆ.
ಶ್ರೀ ವಚನಾನಂದ ಸ್ವಾಮೀಜಿ ಅವರನ್ನು ಎಂಟನೇ ವಯಸ್ಸಿಗೆ ಶ್ರೀ ಮರುಳ ಶಂಕರ ಶಿವಯೋಗಿಗಳ ಮಠಕ್ಕೆ ಕಳುಹಿಸಿದ ತಂದೆ- ತಾಯಿ ಅವರಿಗೆ ಯೋಗ, ಸಂಸ್ಕೃತ, ತತ್ವಜ್ಞಾನ ಮತ್ತು ಪ್ರಾಚೀನ ಭಾರತೀಯ ಗ್ರಂಥಗಳ ಅಧ್ಯಯನ ಮಾಡಿಸಿದ್ದರು. ಈ ಮೂಲಕ ಬಾಲ್ಯದಲ್ಲೇ ಯೋಗ್ಯ ಶಿಕ್ಷಣ ಕೊಡಿಸಿ ಪ್ರತಿಷ್ಠಿತ ಪಂಚಮಸಾಲಿ ಮಠಕ್ಕೆ ಜಗದ್ಗುರುವನ್ನಾಗಿಸಿದ್ದರು. ಜೊತೆಗೆ ಯೋಗ ಕಲಿಕೆಗೆ ಪ್ರೋತ್ಸಾಹ ನೀಡಿ ಶ್ರೇಷ್ಠ ವ್ಯಕ್ತಿತ್ವ ರೂಪಿಸುವಲ್ಲಿ ಪೋಷಕರು ತಮ್ಮ ಕೊಡುಗೆ ನೀಡಿದ್ದರು.