ಬೆಳಗಾವಿ : ಕೋಟೆ ಆವರಣದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಜ.10 ರಂದು ಶ್ರೀ ಸ್ವಾಮಿ ವಿವೇಕಾನಂದರ 163 ನೇ ಜಯಂತಿ ಆಚರಿಸಲಾಗುತ್ತದೆ.
ಬೆಳಗ್ಗೆ 6:15 ಕ್ಕೆ ಉಷಾ ಕೀರ್ತನೆ, 8 ಕ್ಕೆ ವಿಶೇಷ ಪೂಜೆ, 9:30 ಕ್ಕೆ ಶ್ರೀ ಶಿವ ಸಹಸ್ರನಾಮ ಪಾರಾಯಣ, 10:15 ಕ್ಕೆ ಹೋಮ, 11:20 ಕ್ಕೆ ಭಜನೆ, 12 ಕ್ಕೆ ಪ್ರವಚನ, 12:45 ಕ್ಕೆ ಪುಷ್ಪಾಂಜಲಿ, ನಾಮಸಂಕೀರ್ತನೆ,1 ಗಂಟೆಗೆ ಮಹಾ ಮಂಗಳಾರತಿ, ಸಂಜೆ 6 ಕ್ಕೆ ಭಜನೆ, 6:30 ಕ್ಕೆ ಸಂಧ್ಯಾ ಆರತಿ, ಸ್ತೋತ್ರಗಳು, 7 ಕ್ಕೆ ಭಜನೆ ಮತ್ತು ನಾಮಾವಳಿ ನಡೆಯಲಿದೆ ಎಂದು ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಪ್ರಾಣಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


