ಬೆಳಗಾವಿ : ಶ್ರೀ ಪಂತ ಮಹಾರಾಜರ 120 ನೇ ಪುಣ್ಯತಿಥಿ ಮಹೋತ್ಸವ ಪ್ರಯುಕ್ತ ಅ. 9 ಮತ್ತು 10 ರಂದು ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಬುಧವಾರ ಪ್ರೇಮಧ್ವಜದ ಮೆರವಣಿಗೆ ಬೆಳಗಾವಿಯ ಸಮಾದೇವಿ ಗಲ್ಲಿಯ ಶ್ರೀ ಪಂತ ವಾಡೆಯಿಂದ ಹೊರಟು ಶ್ರೀ ಕ್ಷೇತ್ರ ಪಂತ ಬಾಳೇಕುಂದ್ರಿಯ ವಾಡೆವರೆಗೆ ತಲುಪಿತು.
ಅ. 9 ರಂದು ಬೆಳಗ್ಗೆ 5:00 ಗಂಟೆಗೆ ಶ್ರೀ ಪುಣ್ಯ ಸ್ಮರಣ ಕಾರ್ಯಕ್ರಮ, 7 ಗಂಟೆಗೆ ಶ್ರೀಗಳ ಪಲ್ಲಕಿ ಊರಿನ ಶ್ರೀಗಳವಾಡೆಯಿಂದ ಹೊರಟು ಮಧ್ಯಾಹ್ನ ಅಮರಾಯಿಯಲ್ಲಿನ ಶ್ರೀ ಪಂತ ಸ್ಥಾನಕ್ಕೆ ಬರಲಿದೆ. ರಾತ್ರಿ ಪಲ್ಲಕಿ ಸೇವೆ ನಡೆಯಲಿದೆ.
ಅ.10 ರಂದು ಮಧ್ಯಾಹ್ನ 12 ಕ್ಕೆ ಶ್ರೀಗಳ ಮಹಾಪ್ರಸಾದ ನಡೆಯಲಿದೆ. 3 ರಿಂದ 5 ಗಂಟೆವರೆಗೆ ಪ್ರೇಮಾನಂದ ಟಿಪರಿ ಕಾರ್ಯಕ್ರಮ, ಸಂಜೆ 6 ಕ್ಕೆ ಶ್ರೀಗಳ ಪಲ್ಲಕ್ಕಿ ಅಮರಾಯಿಯ ಪೂಜ್ಯ ಸ್ಥಳಕ್ಕೆ ಭೇಟಿ ಕೊಟ್ಟು ಊರಿನ ವಾಡೆವರೆಗೆ ತಲುಪಲಿದೆ. ನಂತರ ಉತ್ಸವ ಮುಕ್ತಾಯವಾಗುವ ಕಾರ್ಯಕ್ರಮ ಇದೆ ಎಂದು ಶ್ರೀ ದತ್ತ ಸಂಸ್ಥಾನದ ಪಂತಬಾಳೇಕುಂದ್ರಿಯ ಉತ್ಸವ ಸಮಿತಿ ತಿಳಿಸಿದೆ.