ಜನ ಜೀವಾಳ ಜಾಲ: ಅಂಕಲಗಿ: ಅಂಕಲಗಿ ಅಡವಿ ಸಿದ್ದೇಶ್ವರ ಶ್ರೀಮಠದ ಗುರುಸಿದ್ಧ ಶ್ರೀಗಳು (78) ದಿ.3 ರಂದು ಮುಂಜಾನೆ ೪-೩೦ ಘಂಟೆಗೆ ಲಿಂಗೈಕ್ಯರಾಗಿದ್ದಾರೆ. ಅವರ ಸಾವು ಕುಂದರನಾಡು ಸೇರಿದಂತೆ ಗೋಕಾಕ ತಾಲೂಕಿಗೆ ಅಪಾರ ನಷ್ಟವಾಗಿದೆ.
ಅನೇಕ ದಶಕಗಳಿಂದ ಅವರು ಮಠದ ಅಭಿವೃದ್ಧಿಗೆ ಶ್ರಮ ವಹಿಸಿದ್ದರು. ಇತ್ತೀಚಿಗೆ ಮರಿ ಸ್ವಾಮಿ ಜೊತೆಗೆ ಅನೇಕ ಭಿನ್ನಾಭಿಪ್ರಾಯ ಉಂಟಾಗಿದ್ದವು. ಮಾನಸಿಕ ಹಾಗೂ ದೈಹಿಕವಾಗಿ ಕೆಲವರ ಕಾಟದಿಂದ ಬಳಲಿ ಕುಗ್ಗಿ ಹೋಗಿದ್ದರು. ಅವರ ಅಂತ್ಯಕ್ರಿಯೆ ಸಾಯಂಕಾಲ ೪ ಗಂಟೆಗೆ ಜರುಗಲಿದೆ. ದೇವರು ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು “ಜನ ಜೀವಾಳ” ಬಳಗ ಪ್ರಾರ್ಥಿಸುತ್ತದೆ.
ಅಂಕಲಗಿ ಅಡವಿ ಸಿದ್ದೇಶ್ವರ ಶ್ರೀಮಠದ ಶ್ರೀಗಳು ಇಂದು ಮುಂಜಾನೆ ಲಿಂಗೈಕ್ಯ
