ಬೆಳಗಾವಿ : ಶಹಾಪುರ ಶ್ರೀ ಜಗಜ್ಯೋತಿ ಬಸವೇಶ್ವರ ಕಲ್ಯಾಣ ಮಂದಿರ ಟ್ರಸ್ಟ್ ಮತ್ತು ಶ್ರೀ ದಾನಮ್ಮ ದೇವಿ ಚಾರಿಟೇಬಲ್ ಟ್ರಸ್ಟ್ ಇವರ ಆಶ್ರಯದಲ್ಲಿ ಗುರುವಾರ ಶ್ರೀ ದಾನಮ್ಮ ದೇವಿಯ ವಿವಾಹ ಸಮಾರಂಭ ಜರುಗಿತು.
ಬೆಳಗ್ಗೆ ಕಂಕಣ ಕಟ್ಟುವ ಕಾರ್ಯಕ್ರಮ ಮತ್ತು ಶ್ರೀ ದಾನಮ್ಮ ದೇವಿ ಮತ್ತು ಸೋಮನಾಥ ಅವರ ಅಕ್ಷತಾರೋಪಣ ಕಾರ್ಯಕ್ರಮ, ಸಂಜೆ ಪಲ್ಲಕಿ ಉತ್ಸವ ಭಕ್ತರ ಸಮ್ಮುಖದಲ್ಲಿ ಜರುಗಿತು. ಪುರಾಣ ಮತ್ತು ಗೋಧೂಳಿ ಮುಹೂರ್ತದಲ್ಲಿ ಶ್ರೀ ದಾನಮ್ಮ ದೇವಿ ಹಾಗೂ ಸೋಮನಾಥ ಅವರ ವಿವಾಹ ಸಮಾರಂಭ ನಡೆಯಿತು.
ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಎಸ್.ಬೆಂಬಳಗಿ, ಕಾರ್ಯದರ್ಶಿ ಸಿ.ಎಂ.ಕಿತ್ತೂರು ಹಾಗೂ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.