ಧಾರವಾಡ : ಶ್ರೀನಗರದ ನಿಡವಣಿ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಧಾರವಾಡ ಜಿಲ್ಲಾ ಮಟ್ಟದ ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳ ಕ್ರೀಡಾಕೂಟದ ಉದ್ಘಾಟನೆ ಸಮಾರಂಭ ಬುಧವಾರ ಗಂಟೆಗೆ ನೆರವೇರಿತು.
ಧಾರವಾಡ ಜಿಲ್ಲೆಯ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಧಾರವಾಡದ ಶಾಲಾ ಶಿಕ್ಷಣ (ಪದವಿ ಪೂರ್ವ) ಉಪ ನಿರ್ದೇಶಕ ಡಾ. ತೇಜಸ್ವಿನಿ ನಾರಾಯಣಕರ ಉಪಸ್ಥಿತರಿದ್ದರು.
ಧಾರವಾಡದ ನಿಡವಣಿ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷೆ ಪ್ರಭಾ ನಿಡವಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಡವಣಿ ಶಿಕ್ಷಣ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳ ಸಾಧನೆಗಳ ಕೆಲವು ಉದಾಹರಣೆಗಳನ್ನು ಉಲ್ಲೇಖಿಸುವ ಮೂಲಕ ನಮ್ಮ ಮಹಾವಿದ್ಯಾಲಯದ ವತಿಯಿಂದ ಕ್ರೀಡೆಯಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಾಗುವುದು ಎಂದು ತಿಳಿಸಿದರು. ರಾಷ್ಟ್ರದ ಅಭಿವೃದ್ಧಿಯಲ್ಲಿ ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಧಾರವಾಡ ಜಿಲ್ಲಾ ಕ್ರೀಡಾ ಸಂಚಾಲಕ ನಂದೀಶ ಕಾಖಂಡಕಿ , ಪಠ್ಯದ ಜೊತೆಗೆ ಪಠ್ಯೆತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕ್ರೀಡೆಯಲ್ಲಿ ಸಾಧನೆ ಮಾಡಿದ ಸಚಿನ್ ತೆಂಡೂಲ್ಕರ್ ಬಗ್ಗೆ ಉದಾಹರಣೆ ನೀಡಿ ವಿದ್ಯಾರ್ಥಿಗಳಲ್ಲಿ ಕ್ರೀಡೆ ಬಗ್ಗೆ ಉತ್ಸಾಹವನ್ನು ತುಂಬಿದರು.
ಈರಣ್ಣ ಹುಬ್ಬಳ್ಳಿ, ಅಧ್ಯಕ್ಷರು ಧಾರವಾಡ ಜಿಲ್ಲಾ ದೈಹಿಕ ಶಿಕ್ಷಣ ಸಂಘ, ಶಾಲಾ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ಸದೃಢರಾಗಬೇಕು. ಧಾರವಾಡ ಜಿಲ್ಲೆಯ ಕ್ರೀಡಾ ವಿದ್ಯಾರ್ಥಿಗಳ ಸಾಧನೆಗಳನ್ನು ತಿಳಿಸಿದರು. ಅಂಜಲಿ ಪರಪ್ಪ ಕ್ಷಾತ್ರತೇಜ್, ಪ್ರಧಾನ ಕಾರ್ಯದರ್ಶಿಗಳು ಧಾರವಾಡ ಜಿಲ್ಲಾ ಟೈಕೊಂಡೋ ಅಸೋಸಿಯೇಷನ್, ಭೈರವಿ ಹಾಗೂ ಸಹನಾ ಎಸ್ ಆರ್ ಜುಡೋ ತರಬೇತಿದಾರರು ಮತ್ತು ಧಾರವಾಡದ ಉನ್ನತ ಶಿಕ್ಷಣ ಇಲಾಖೆಯ ಜಂಟಿ ನರ್ದೇಶಕರು (ನಿವೃತ್ತ) ಪ್ರೊ. ಡಿ.ಎಂ. ನಿಡವಣಿ ಇವರು ವಿದ್ಯಾರ್ಥಿಗಳು ಈ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಆಸಕ್ತಿ ತೋರಿಸಿದ್ದಕ್ಕಾಗಿ ಅಭಿನಂದಿಸಿದರು.
ಕ್ರೀಡಾ ಕೂಟ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಸದೃಢ ದೇಹಕ್ಕೆ ಅತೀ ಅವಶ್ಯಕತೆಯಿದೆ ಎಂದು ತಿಳಿಸಿದರು.
ಉತ್ತಮ ಭವಿಷ್ಯಕ್ಕೆ ಅದನ್ನು ಕೊಂಡೊಯ್ಯಲು ಸಹಾಯ ಮಾಡುತ್ತವೆ. ಅಧ್ಯಯನದ ಜೊತೆಗೆ ಈ ಕ್ರೀಡಾಕೂಟ ಕಾರ್ಯಕ್ರಮಗಳು ವಿದ್ಯಾರ್ಥಿಗಳು ತಮ್ಮ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅವರನ್ನು ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಪ್ರಾಂಶುಪಾಲೆ ನಾಗವೇಣಿ ಮಲ್ಲಾಪುರ ಸ್ವಾಗತಿಸಿದರು. ತೇಜಸ್ವಿನಿ ಶಿವಾನಂದ್ ವಂದಿಸಿದರು. ಪ್ರಿಯಾ ಮಡಿವಾಳರ ನಿರೂಪಿಸಿದರು.
ಹನುಮಂತಪ್ಪ ಡಿ, ರಂಗನಾಥ ರಂಗಣ್ಣನವರ್, ಸಂಕೇತ್ ನಿಡವಣಿ ಪ್ರೇರಣಾ ಭಾಷಣಗಳೊಂದಿಗೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶೈಕ್ಷಣಿಕ ಶ್ರೇಷ್ಠತೆ ಮತ್ತು ಕ್ರೀಡಾ ಕೂಟಗಳ ಭಾಗವಹಿಸುವಿಕೆಯನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.