ಬೆಳಗಾವಿ :ಪ್ರಸ್ತುತ ಅಧಿಕ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದ ತುಂಬಿ ಹರಿಯುತ್ತಿರುವ ಜಲಧಾರೆಗಳ ವೀಕ್ಷಣೆಗೆ ಹೋಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗಾವಿಯಿಂದ ಪ್ರತಿ ೨ನೇ, ೪ನೇ ಶನಿವಾರ ಮತ್ತು ಪ್ರತಿ ಭಾನುವಾರ ಗಳಂದು ೨೨ ನೇ ಜುಲೈ ೨೦೨೩ ರಿಂದ ೨೭ ಅಗಷ್ಟ ೨೦೨೩ ರ ವರೆಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಪ್ರಯಾಣಿಸಲು ವೇಗದೂತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ಯಾಕೇಜ-೧ ರ ಮಾರ್ಗ: ಬೆಳಗಾವಿ-ಹಿಡಕಲ್ ಡ್ಯಾಂ-ಗೋಡಚಿನ ಮಲ್ಕಿ-ಗೋಕಾಕ ಫಾಲ್ಸ
ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬೆಳಿಗ್ಗೆ ೯ ಗಂಟೆಗೆ ಹೊರಟ ಬಸ್ಸು ೧೦ ಗಂಟೆಗೆ ಹಿಡಕಲ್ ಡ್ಯಾಂ ತಲುಪಲಿದೆ ಹಾಗೂ ೧ ಗಂಟೆಗಳ ಕಾಲ ಸ್ಥಳ ವೀಕ್ಷಣೆಗೆ ಸಮಯ ನಿಗದಿಪಡಿಸಲಾಗಿದೆ.ಹಿಡಕಲ್ ಡ್ಯಾಂ ಸೈಟ್ ಇಂದ ಬೆಳಿಗ್ಗೆ ೧೧ ಗಂಟೆಗೆ ಹೊರಟ ಬಸ್ಸು ೧೧.೩೦ ಗಂಟೆಗೆ ಗೋಡಚಿನ ಮಲ್ಕಿ ತಲುಪಲಿದೆ ಹಾಗೂ ೧ ಗಂಟೆ ೩೦ ನಿಮಿಷಗಳ ಕಾಲ ಸ್ಥಳ ವೀಕ್ಷಣೆಗೆ ಸಮಯ ನಿಗದಿಪಡಿಸಲಾಗಿದೆ.
ಗೊಡಚಿನ ಮಲ್ಕಿ ಇಂದ ಮದ್ಯಾಹ್ನ ೧ ಗಂಟೆಗೆ ಹೊರಟ ಬಸ್ಸು ೧.೩೦ ಗಂಟೆಗೆ ಗೋಕಾಕ ಫಾಲ್ಸ ತಲುಪಲಿದೆ ಹಾಗೂ ೨ ಗಂಟೆ ೩೦ ನಿಮಿಷಗಳ ಕಾಲ ಸ್ಥಳ ವೀಕ್ಷಣೆಗೆ ಸಮಯ ನಿಗದಿಪಡಿಸಲಾಗಿದೆ.
ಗೋಕಾಕ ಫಾಲ್ಸ ಇಂದ ಸಂಜೆ ೪ ಗಂಟೆಗೆ ಹೊರಟ ಬಸ್ಸು ಸಂಜೆ ೬ ಗಂಟೆಗೆ ಬೆಳಗಾವಿಗೆ ತಲುಪಲಿದೆ.
ಸರದಿ ಸಾರಿಗೆಗೆ ಪ್ರತಿ ಪ್ರಯಾಣಿಕರಿಗೆ ಹೋಗಿ ಬರುವ ಸೇರಿ ರೂ. ೧೯೦/- ದರ ಆಕರಣೆ ಇರುತ್ತದೆ ಹಾಗೂ ಸಾರಿಗೆಗಳು ವಿಶೇಷ ಪ್ಯಾಕೇಜ್ ಸಾರಿಗೆಗಳಾಗಿರುವುದರಿಂದ ಈ ಸಾರಿಗೆಗಳಲ್ಲಿ ಮಹಿಳಾ ಪ್ರಯಾಣಿಕರಿಗೆ “ಶಕ್ತಿ ಯೋಜನೆ” ಅಡಿಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ.
ಪ್ಯಾಕೇಜ-೨ ಮಾರ್ಗ: ಬೆಳಗಾವಿ-ಅಂಬೋಲಿ(ವ್ಹಾಯಾ ನಾಗರ ತಾಸ ಜಲಧಾರೆ)ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬೆಳಿಗ್ಗೆ ೯ ಗಂಟೆಗೆ ಹೊರಟ ಬಸ್ಸು ೧೧ ಗಂಟೆಗೆ ನಾಗರ ತಾಸ ಜಲಧಾರೆ ತಲುಪಲಿದೆ ಹಾಗೂ ೧ ಗಂಟೆಗಳ ಕಾಲ ಸ್ಥಳ ವೀಕ್ಷಣೆಗೆ ಸಮಯ ನಿಗದಿಪಡಿಸಲಾಗಿದೆ.
ನಾಗರ ತಾಸ ಜಲಧಾರೆ ಇಂದ ಬೆಳಿಗ್ಗೆ ೧೨ ಗಂಟೆಗೆ ಹೊರಟ ಬಸ್ಸು ೧೨.೩೦ ಗಂಟೆಗೆ ಅಂಬೋಲಿ ಜಲಧಾರೆ ತಲುಪಲಿದೆ ಹಾಗೂ ೩ ಗಂಟೆ ೩೦ ನಿಮಿಷಗಳ ಕಾಲ ಸ್ಥಳ ವೀಕ್ಷಣೆಗೆ ಸಮಯ ನಿಗದಿಪಡಿಸಲಾಗಿದೆ.
ಅಂಬೋಲಿ ಜಲಧಾರೆ ಇಂದ ಸಂಜೆ ೪ ಹೊರಟ ಬಸ್ಸು ಸಂಜೆ ೬ ಗಂಟೆಗೆ ಬೆಳಗಾವಿಗೆ ತಲುಪಲಿದೆ.
ಈ ಸಾರಿಗೆಗೆ ಪ್ರತಿ ವಯಸ್ಕ ಪ್ರಯಾಣಿಕರಿಗೆ ಹೋಗಿ ಬರುವ ಸೇರಿ ರೂ. ೨೯೦/-ದರ ಆಕರಣೆ ಇರುತ್ತದೆ ಹಾಗೂ ಸದರಿ ಸಾರಿಗೆಗಳಿಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೇಟ್ ಕಾಯ್ದಿರಿಸುವ ವ್ಯವಸ್ಥೆ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಿಲ್ದಾಣ ಮೇಲ್ವಿಚಾರಕರು ಕೇ.ಬ.ನಿ ಬೆಳಗಾವಿ ಮೋ.ಸಂ ೭೭೬೦೯೯೧೬೧೨, ೭೭೬೦೯೯೧೬೧೩ ಹಾಗೂ ಘಟಕ ವ್ಯವಸ್ಥಾಪಕರು ಬೆಳಗಾವಿ-೧ ಮೊ.ಸಂ ೭೭೬೦೯೯೧೬೨೫ ರವರನ್ನು ಸಂಪರ್ಕಿಸಬಹುದು.
ಈ ವಿಶೇಷ ಸಾರಿಗೆ ಸದುಪಯೋಗವನ್ನು ಸಾರ್ವಜನಿಕ ಪ್ರಯಾಣಿಕರು ಪಡೆದುಕೊಳ್ಳಬಹುದಾಗಿದೆ ಎಂದು ವಾಕರಸಾಸಂಸ್ಥೆಯ ಹಿರಿಯವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.