ಬೆಳಗಾವಿ :ಫೆ. 10 ರಿಂದತಿರುಪತಿ – ಮಡಗಾಂವ್ ನಡುವೆ ವಿಶೇಷ ರೈಲುಆರಂಭವಾಗಿದೆ.
ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಹಾಗೂ ಬೇಡಿಕೆ ಸಲುವಾಗಿ ತಿರುಪತಿ ಮತ್ತು ಮಡಗಾಂವ ನಡುವೆ ವಿಶೇಷ ರೈಲು ಓಡಿಸಲು ದಕ್ಷಿಣ ಮಧ್ಯ ರೈಲ್ವೆ ವಲಯವು ನಿರ್ಧರಿಸಿದೆ.
ರೈಲು ಸಂಖ್ಯೆ 07451 ತಿರುಪತಿ – ಮಡಗಾಂವ್ ರೈಲು ಫೆಬ್ರುವರಿ 10, 2023 (ಶುಕ್ರವಾರ) ರಂದು ತಿರುಪತಿ ನಿಲ್ದಾಣದಿಂದ ಬೆಳಿಗ್ಗೆ 11:30 ಗಂಟೆಗೆ ಹೊರಟು, ಮರುದಿನ (ಶನಿವಾರ) ಬೆಳಿಗ್ಗೆ 05:00 ಗಂಟೆಗೆ ಮಡಗಾಂವ ನಿಲ್ದಾಣಕ್ಕೆ ಬಂದು ತಲುಪಲಿದೆ.
ಈ ರೈಲು ಮಾರ್ಗದಲ್ಲಿ ರೆಣಿಗುಂಟ, ಕಡಪಾ, ಯರಿಗುಂಟ್ಲಾ, ತಾಡಿಪತ್ರಿ, ಗುತ್ತಿ, ಗುಂತಕಲ್, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಮುನಿರಾಬಾದ್, ಕೊಪ್ಪಳ, ಗದಗ, ಅಣ್ಣಿಗೇರಿ, ಎಸ್.ಎಸ್.ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಕ್ಯಾಸಲ್ ರಾಕ್, ಕುಲೇಂ ಮತ್ತು ಸನ್ವರ್ಡಂ ಚರ್ಚ್ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.
ಈ ರೈಲಿನಲ್ಲಿ 2 ತ್ರಿ ಟೈರ್ ಎಸಿ ಬೋಗಿಗಳು, 10 ಎರಡನೇ ದರ್ಜೆಯ ಸ್ಲೀಪರ್ ಕ್ಲಾಸ್ ಬೋಗಿಗಳು, 8 ಸಾಮಾನ್ಯ ದ್ವಿತೀಯ ದರ್ಜೆಯ ಬೋಗಿಗಳು ಮತ್ತು 2 ಲಗೇಜ್ ಕಮ್ ಬ್ರೇಕ್ ವ್ಯಾನ್ಗಳ ಸಂಯೋಜನೆ ಹೊಂದಿರಲಿದ್ದು, ಈ ರೈಲಿನ ದರವು 1.3 ರಷ್ಟು ಹೆಚ್ಚಾಗಿರುತ್ತದೆ.
ವಿಶೇಷ ಸೂಚನೆ ಈ ರೈಲಿನಲ್ಲಿ ಬೆಡ್ ಶೀಟು ಮತ್ತು ಹೊದಿಕೆಯ ಸೌಲಭ್ಯ ಇರುವುದಿಲ್ಲ ಎಂದು
ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ಎಂದು ತಿಳಿಸಿದ್ದಾರೆ.