This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಶಬರಿಮಲೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಬೆಳಗಾವಿ, ಹುಬ್ಬಳ್ಳಿಯಿಂದ ಕೊಲ್ಲಂಗೆ ವಿಶೇಷ ರೈಲು ಸಂಚಾರ Special train service from Belgaum, Hubli to Kollam for the convenience of Sabarimala pilgrims


 

ಬೆಳಗಾವಿ :
ಬೆಳಗಾವಿ ಸಂಸದೆ ಮಂಗಲಾ ಅಂಗಡಿ ಅವರು ಶಬರಿಮಲೆಗೆ ಹೋಗುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಬೆಳಗಾವಿಯಿಂದ ಕೊಲ್ಲಂಗೆ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೇ ಸಚಿವಾಲಯಕ್ಕೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಈಗ, ಕೊಲ್ಲಂಗೆ ವಿಶೇಷ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ರೈಲು ಸಂಖ್ಯೆ 07357 ಬೆಳಗಾವಿ – ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್ ರೈಲು (1 ಟ್ರಿಪ್) ನವೆಂಬರ್ 20 ರಂದು ಬೆಳಿಗ್ಗೆ 11:30ಕ್ಕೆ ಬೆಳಗಾವಿಯಿಂದ ಹೊರಟು ಮರುದಿನ ಮಧ್ಯಾಹ್ನ 3.15 ಕ್ಕೆ ಕೊಲ್ಲಂ ತಲುಪಲಿದೆ. ಇದೇ ಮಾರ್ಗದಲ್ಲಿ ಹಿಂದಿರುಗುವ, ರೈಲು ಸಂಖ್ಯೆ 07358 ಕೊಲ್ಲಂ-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು ನವೆಂಬರ್ 21 ರಂದು ಕೊಲ್ಲಂನಿಂದ ಸಾಯಂಕಾಲ 05:10ಕ್ಕೆ ಹೊರಟು ಮರುದಿನ ರಾತ್ರಿ 11 ಗಂಟೆಗೆ ಬೆಳಗಾವಿ ತಲುಪಲಿದೆ.
ಈ ವಿಶೇಷ ರೈಲಿಗೆ ಎರಡೂ ಮಾರ್ಗದಲ್ಲಿ ಖಾನಾಪುರ, ಲೋಂಡಾ, ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣೆ ಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರು, ಪೊದನೂರು, ಪಲಕ್ಕಾಡ್, ತ್ರಿಶೂರ್‌, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ, ಕಾಯಂಕುಲಂ, ಸಸ್ತಾನ್‌ಕೋಟ್ಟ ನಿಲ್ದಾಣಗಳಲ್ಲಿ ನಿಲುಗಡೆ ಇದೆ.

ಈ ವಿಶೇಷ ರೈಲು ಒಂದು 2 ಟೈರ್‌ ಹವಾನಿಯಂತ್ರಿತ ದರ್ಜೆ, ಎಂಟು 3 ಟೈರ್‌ ಹವಾನಿಯಂತ್ರಿತ ದರ್ಜೆ, ಒಂಬತ್ತು ಸ್ಲೀಪರ್ ಕ್ಲಾಸ್ ಮತ್ತು ಎರಡು ಲಗೇಜ್ ಕಮ್ ಬ್ರೇಕ್-ವ್ಯಾನ್‌ ಗಳೊಂದಿಗೆ ಜನರೇಟರ್ ಕಾರ್ ಒಳಗೊಂಡಿರುವ 20 ಬೋಗಿಗಳು ಹೊಂದಿರುತ್ತದೆ.

ಹುಬ್ಬಳ್ಳಿ – ಕೊಲ್ಲಂ – ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ (1 ಟ್ರಿಪ್):
ರೈಲು ಸಂಖ್ಯೆ 07359 ಹುಬ್ಬಳ್ಳಿ – ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್ ರೈಲು ನವೆಂಬರ್ 27 ರಂದು ಮಧ್ಯಾಹ್ನ 02:40 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಮಧ್ಯಾಹ್ನ 03:15 ಕ್ಕೆ ಕೊಲ್ಲಂ ತಲುಪಲಿದೆ. ಇದೆ ಮಾರ್ಗದಲ್ಲಿ ಹಿಂದಿರುಗುವ, ರೈಲು ಸಂಖ್ಯೆ 07360 ಕೊಲ್ಲಂ – ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು ನವೆಂಬರ್ 28 ರಂದು ಕೊಲ್ಲಂನಿಂದ ಸಾಯಂಕಾಲ 5:10 ಕ್ಕೆ ಹೊರಟು ಮರುದಿನ ರಾತ್ರಿ 8 ಗಂಟೆಗೆ ಹುಬ್ಬಳ್ಳಿ ತಲುಪಲಿದೆ.
ಈ ವಿಶೇಷ ರೈಲಿಗೆ ಎರಡೂ ಮಾರ್ಗದಲ್ಲಿ ಹಾವೇರಿ, ರಾಣೆ ಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರು, ಪೊದನೂರು, ಪಾಲಕ್ಕಾಡ್, ತ್ರಿಶೂರ್‌, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ, ಕಾಯಂಕುಲಂ, ಸಸ್ತಾನ್‌ಕೋಟ್ಟ ನಿಲ್ದಾಣಗಳಲ್ಲಿ ನಿಲುಗಡೆ ಇದೆ.

ಬೆಳಗಾವಿ – ಕೊಲ್ಲಂ – ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ (7 ಟ್ರಿಪ್)
ಬೆಳಗಾವಿ – ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07361) ರೈಲು ಡಿಸೆಂಬರ್ 4 ರಿಂದ ಜನವರಿ 15 ರ ವರೆಗೆ ಬೆಳಗಾವಿಯಿಂದ ಪ್ರತಿ ಭಾನುವಾರ ಬೆಳಿಗ್ಗೆ 11:30 ಗಂಟೆಗೆ ಬೆಳಗಾವಿಯಿಂದ ಹೊರಡಲಿದ್ದು, ಮರುದಿನ ಮಧ್ಯಾಹ್ನ 03.15 ಕ್ಕೆ ಕೊಲ್ಲಂ ತಲುಪಲಿದೆ. ಇದೆ ಮಾರ್ಗದಲ್ಲಿ ಹಿಂದಿರುಗುವ ಕೊಲ್ಲಂ-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07362) ರೈಲು ಡಿಸೆಂಬರ್ 5 ರಿಂದ ಜನವರಿ 16ರ ವರೆಗೆ ಕೊಲ್ಲಂನಿಂದ ಪ್ರತಿ ಸೋಮವಾರದಂದು ಸಾಯಂಕಾಲ 05:10 ಗಂಟೆಗೆ ಹೊರಟು ಮರುದಿನ ರಾತ್ರಿ 11 ಗಂಟೆಗೆ ಬೆಳಗಾವಿ ತಲುಪಲಿದೆ.
ಈ ವಿಶೇಷ ರೈಲಿಗೆ ಎರಡೂ ಮಾರ್ಗದಲ್ಲಿ ಖಾನಾಪುರ, ಲೋಂಡಾ, ಧಾರವಾಡ, ಎಸ್‌.ಎಸ್‌.ಎಸ್ ಹುಬ್ಬಳ್ಳಿ, ಹಾವೇರಿ, ರಾಣೆ ಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರು, ಪೊದನೂರು, ಪಾಲಕ್ಕಾಡ್, ತ್ರಿಶೂರ್‌, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ, ಕಾಯಂಕುಲಂ, ಸಸ್ತಾನ್‌ಕೋಟ್ಟ ನಿಲ್ದಾಣಗಳಲ್ಲಿ ನಿಲುಗಡೆ ಇದೆ.
ಈ ಮೇಲೆ ತಿಳಿಸಿದ ವಿಶೇಷ ರೈಲುಗಳು ಒಂದು 2 ಟೈರ್‌ ಹವಾನಿಯಂತ್ರಿತ ದರ್ಜೆ, ಎರಡು 3 ಟೈರ್‌ ಹವಾನಿಯಂತ್ರಿತ ದರ್ಜೆ, ಹತ್ತು ಸ್ಲೀಪರ್ ಕ್ಲಾಸ್ ಮತ್ತು ಎರಡು ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್-ವ್ಯಾನ್‌ ಗಳಿಂದ ಕೂಡಿದ/ಅಂಗವಿಕಲ ಸ್ನೇಹಿ ಕಂಪಾರ್ಟ್‌ಮೆಂಟ್ ಒಳಗೊಂಡಿರುವ 15 ಬೋಗಿಗಳು ಹೊಂದಿರುತ್ತದೆ ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.


Jana Jeevala
the authorJana Jeevala

Leave a Reply