ಬೆಳಗಾವಿ : ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತಿರುವ ಕಾರಣದಿಂದ ಕೃಷ್ಣಾ ನದಿಯಿಂದ 3 ಲಕ್ಷ ಕ್ಯೂಸೆಕ್ ನೀರು ಮತ್ತು ಘಟಪ್ರಭಾ ನದಿಯಿಂದ 73 ಸಾವಿರ ಕ್ಯೂಸೆಕ್ಗಿಂತ ಹೆಚ್ಚು ನೀರನ್ನು ಹರಿಬಿಡುತ್ತಿರುವ ಪರಿಣಾಮವಾಗಿ ಜಿಲ್ಲೆಯ ಕೃಷ್ಣಾ ಹಾಗೂ ಘಟಪ್ರಭಾ ನದಿಯ ವ್ಯಾಪ್ತಿಯಲ್ಲಿ ಬರುವಂತಹ 44 ಕ್ಕೂ ಹೆಚ್ಚು ಸೇತುವೆಗಳು ಜಲಾವೃತಗೊಂಡು ರಸ್ತೆ ಸಾರಿಗೆ ಸಂಪರ್ಕ ಕಡಿತಗೊಂಡಿದೆ ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿದ್ದು ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗಾವಿಯಿಂದ ಮಿರಜವರಗೆ ಪ್ಯಾಸೆಂಜರ್ ವಿಶೇಷ ರೈಲು ಪ್ರಾರಂಭಿಸುವುದರ ಬಗ್ಗೆ ನೈರುತ್ಯ ರೈಲ್ವೆ ಮಹಾಪ್ರಬಂಧಕರಿಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅಗಸ್ಟ್ 1 ರಿಂದ 4 ದಿನಗಳವರೆಗೆ ಪ್ಯಾಸೆಂಜರ್ ವಿಶೇಷ ರೈಲು ಬಿಡಲು ಆದೇಶಿಸಿರುತ್ತಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಮಂಗಳವಾರ ಜು-30ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಬೆಳಗಾವಿ-ಮಿರಜ ರೈಲು ಅ-01 (07301) ಮುಂಜಾನೆ 06 ಗಂಟೆಗೆ ಬೆಳಗಾವಿ ನಿಲ್ದಾಣದಿಂದ ಹೊರಟು ಮು. 09ಕ್ಕೆ ಮಿರಜ ನಿಲ್ದಾಣ ತಲುಪಲಿದೆ.
ಮಿರಜ-ಬೆಳಗಾವಿ ರೈಲು ಸಂಖ್ಯೆ (07302) ಮುಂಜಾನೆ 09.50 ಕ್ಕೆ ಮಿರಜನಿಂದ ಹೊರಟು ಮಧ್ಯಾಹ್ನ 12.50 ಕ್ಕೆ ಬೆಳಗಾವಿ ನಿಲ್ದಾಣ ತಲುಪಲಿದೆ.
ಬೆಳಗಾವಿ-ಮಿರಜ ರೈಲು (07303) ಮಧ್ಯಾಹ್ನ 01.30 ಗಂಟೆಗೆ ಬೆಳಗಾವಿ ನಿಲ್ದಾಣದಿಂದ ಹೊರಟು ಸಂಜೆ 04.30ಕ್ಕೆ ಮಿರಜ ತಲುಪಲಿದೆ.
ಮಿರಜ-ಬೆಳಗಾವಿ ರೈಲು ಸಂಖ್ಯೆ (07304) ಸಂಜೆ 05.35 ಕ್ಕೆ ಮಿರಜನಿಂದ ಹೊರಟು ರಾತ್ರಿ 08.35 ಕ್ಕೆ ಬೆಳಗಾವಿ ನಿಲ್ದಾಣ ತಲುಪಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ನನ್ನ ಮನವಿಗೆ ಸ್ಪಂದಿಸಿ ಶೀಘ್ರ ರೈಲಿನ ವ್ಯವಸ್ಥೆ ಮಾಡಿದ ನೈರುತ್ಯ ರೈಲ್ವೆ ಮಹಾಪ್ರಬಂಧಕರಿಗೆ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.