ಬೆಳಗಾವಿ:ವಿಧಾನಸಭೆ ಚುನಾವಣೆಗೆ ರಂಗೇರುವ ಅವಧಿ ಮುಂಚೆಯೇ ಆಡಳಿತಯಂತ್ರ ಸನ್ನದ್ಧಗೊಳ್ಳುತ್ತಿದ್ದು ಜಿಲ್ಲಾಡಳಿತ ಬಿರುಸಿನ ಚಟುವಟಿಕೆ ನಡೆಸಿದೆ.
ಜಿಲ್ಲಾಧಿಕಾರಿ ನಿತೇಶ ಪಾಟೀಲ, ಎಸ್ಪಿ ಡಾ. ಸಂಜೀವಕುಮಾರ ಪಾಟೀಲ ಇಂದು ಜಿಲ್ಲೆಯ ಯರಗಟ್ಟಿ, ಕೌಜಲಗಿ, ಮೂಡಲಗಿ, ಘಟಪ್ರಭಾ, ಸಿಂಧಿಕುರಬೇಟ, ಗೋಕಾಕ ಹಾಗೂ ಬೆಲ್ಲದ ಬಾಗೇವಾಡಿ, ಉಳ್ಳಾಗಡ್ಡಿ ಖಾನಾಪುರ ಗ್ರಾಮಗಳಿಗೆ ಭೇಟಿ ನೀಡಿದರು.
ಕ್ಲಸ್ಟರ್ ಬೂತ್, ಮಸ್ಟರಿಂಗ್ ಬೂತ್ಸ್ ಮತ್ತು ಸ್ಟ್ರಾಂಗ್ ರೂಮು ವ್ಯವಸ್ಥೆ ಚುನಾವಣಾ ಸಿಬ್ಬಂಧಿಗೆ ಬೇಸಿಗೆಯ ಸಂಬಂಧ ಫ್ಯಾನ್, ಟಾಯ್ಲೆಟ್, ಕುಡಿಯುವ ನೀರು, ಕೂಡ್ರುವ ವ್ಯವಸ್ಥೆ ಕುರಿತು ಜಿಲ್ಲಾಧಿಕಾರಿ ಪರಿಶೀಲಿಸಿದರು.
ಗೋಕಾಕ, ರಾಯಭಾಗ, ಚಿಕ್ಕೋಡಿ ಪ್ರದೇಶಗಳಲ್ಲಿ ಬಿಸಿಲಿನಪ್ರಖರತೆ ಹೆಚ್ಚಿರುವುದರಿಂದ ಜಿಲ್ಲಾಡಳಿತ ಚುನಾಣಾ ಸಿಬ್ಬಂಧಿಗೆ ಈ ಭಾರಿ ಹೆಚ್ಚಿನ ಮುತುವರ್ಜಿ ವಹಿಸಿದೆ.