ಪತ್ರಿಕೋದ್ಯಮ ವಿದ್ಯಾರ್ಥಿಗಳಲ್ಲಿ ಸಮಯದ ಅರಿವು ಮತ್ತು ಶಿಸ್ತು ಅತಿಮುಖ್ಯ : ಎಸ್ಪಿ ಡಾ. ಸಂಜೀವ್ ಪಾಟೀಲ್
ವಿಧ್ಯಾರ್ಥಿಗಳಿಗೆ ಪತ್ರಿಕೋದ್ಯಮ & ಪೊಲೀಸರ ಪಾತ್ರ ವಿವರಿಸಿದ SP.
ಚಿಕ್ಕೋಡಿ : ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ದೈಹಿಕ ಚಟುವಟಿಕೆ, ಸಮಯದ ಮಹತ್ವ ಮತ್ತು ಓದುವ ನಿರಂತರ ಹವ್ಯಾಸವನ್ನು ಬೆಳೆಸಿ ಕೊಂಡಾಗ ಮಾತ್ರ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷಾಧಿಕಾರಿ ಡಾ. ಸಂಜೀವ್ ಪಾಟೀಲ್ ವಿಧ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಚಿಕ್ಕೋಡಿ ಪಟ್ಟಣದ ಕೆ.ಎಲ್.ಇ. ಸಂಸ್ಥೆಯ ಬಸವಪ್ರಭು ಕೋರೆ ಪದವಿ ಮಹಾವಿದ್ಯಾಲಯದಲ್ಲಿರುವ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ “ಪ್ರಜಾಪ್ರಭುತ್ವದಲ್ಲಿ ಪತ್ರಿಕೋದ್ಯಮ ಮತ್ತು ಪೊಲೀಸ್ ಇಲಾಖೆಯ ಪಾತ್ರ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪತ್ರಕರ್ತರು ಸಮಾಜದಲ್ಲಿ ನಿರ್ಭಿತಿಯಿಂದ ವರದಿಗಾರಿಗೆ ಮಾಡಿದಾಗ ಸಮಾಜದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ಹೇಳಿದರು.
ಇದೇ ವೇಳೆ ಪತ್ರಿಕೋದ್ಯಮ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಅವರು ಒಬ್ಬ ವಿದ್ಯಾರ್ಥಿ ಏನ ಸಾಧಿಸಬೇಕು ಎನ್ನುವುದಕ್ಕಿಂತ ಆತ ಏನೂ ಮಾಡಬಲ್ಲ ಎಂಬುದನ್ನು ಮೊದಲು ಅರಿತು ತನ್ನ ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜತೆಗೆ ತಮ್ಮ ದೈನಿಕ ಕೆಲಸ ಕಲಿಯುವುದು ಅವಶ್ಯಕವಾಗಿದೆ. ಕಲಿತ ಕೆಲಸ ಯಾವಾಗು ಕೈ ಬಿಡುವುದಿಲ್ಲ ಎಂದರು.
10 ವಿದ್ಯಾರ್ಥಿಗಳಲ್ಲಿ ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಸರ್ಕಾರಿ ಕೆಲಸ ಹಿಡಿಯಬಲ್ಲರು. ಆ ಹತ್ತರಲ್ಲಿ ಒಬ್ಬರಾಗಬೇಕೆಂದರೆ ಅದಕ್ಕಾಗಿ ವಿಧ್ಯಾರ್ಥಿಗಳ ಜೀವನ ಸಮಯ ಹಾಗೂ ಶಿಸ್ತಿನಿಂದ ಕೂಡಿದಾಗ ಮಾತ್ರ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಇದೆ ವೇಳೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಬಿ.ಕೆ ಕಾಲೇಜಿನ ಪ್ರಾಚಾರ್ಯ ಪ್ರೊ. ಯು. ಆರ್. ರಜಪೂತ್ ಮಾತನಾಡಿ ವಿಧಾರ್ಥಿಗಳು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಈಗಿನಿಂದಲೆ ಕಠಿಣ ಪರಿಶ್ರಮದಿಂದ ಸಮಾಜದ ದಿನನಿತ್ಯದ ವಿವಿಧ ಆಯಮಗಳಲ್ಲಿ ಸದಾ ಕಾರ್ಯೊನ್ಮುಖವಾಗಿರಬೇಕೆಂದು ಹೇಳಿದರು
ಈ ಸಂದರ್ಭದಲ್ಲಿ ಆಯ್ ಕ್ಯೂ ಏ ಸಿ ಸಂಯೋಜಕ ವಿನಾಯಕ ಮಜಲಾಪುರೆ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸದಾಶಿವ ಹಾದಿಮನಿ ವೇದಿಕೆಯ ಮೇಲೆ ಉಪಸ್ತಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಡಾ.ಎಸ್.ಎಮ್. ಪಾನಬುಡೇ, ಜೆ. ಎಲ್. ಕದಮ್. ಬಿ.ಜಿ. ಕುಲಕರ್ಣಿ ಸೇರಿದಂತೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.