ಶಿಗ್ಗಾವಿ :
ಶಿಗ್ಗಾವಿ ವಿಧಾನಸಭಾ ಮತಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸುಪುತ್ರ ಭರತ ಬೊಮ್ಮಾಯಿ ಸೋಮವಾರ ಭರ್ಜರಿ ಮತಯಾಚನೆ ನಡೆಸಿದ್ದಾರೆ.
ಪ್ರಚಾರ ಆರಂಭಿಸಿದ ಆರಂಭದ ದಿನವೇ ಅವರು ಗೆಲುವನ್ನು ತೀರ್ಮಾನ ಮಾಡುವುದು ಕ್ಷೇತ್ರದ ಜನರೇ ಹೊರತು ಕಾಂಗ್ರೆಸ್ ಅಲ್ಲ ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ನನ್ನ ತಂದೆಯನ್ನು ಸೋಲಿಸುವುದಾಗಿ ಹೇಳಿದ್ದಾರೆ. ತಂದೆಯವರು 35 ವರ್ಷದ ರಾಜಕೀಯ ಅನುಭವದಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಅವರನ್ನು ಗೆಲ್ಲಿಸಬೇಕು. ತಂದೆಯವರು ಮತ್ತೆ ಆಯ್ಕೆಯಾಗಬೇಕೋ ಬೇಡವೆಂಬ ತೀರ್ಮಾನವನ್ನು ಜನ ಮಾಡುತ್ತಾರೆ. ಕಾಂಗ್ರೆಸ್ ಇದನ್ನು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.