ನವದೆಹಲಿ: ಕೊನೆಗೂ ಆಮ್ ಆದ್ಮಿ ಪಕ್ಷಕ್ಕೆ ಮಾಜಿ ನಾಯಕನ ಆಗಮನವಾಗಿದೆ. ಇದೀಗ ಹೊಸ ಹುಮ್ಮಸ್ಸಿನಲ್ಲಿ ಈ ನಾಯಕ ಪಕ್ಷ ಕಟ್ಟುವ ತವಕದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಸಡ್ಡು ಹೊಡೆಯಲು ಮತ್ತೆ ಮುಂದಾಗಿದ್ದಾರೆ. ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್ ನಾಯಕ ಅರವಿಂದ ಕೇಜ್ರಿವಾಲ್ ಅಬಕಾರಿ ಹಗರಣದಲ್ಲಿ ಜೈಲು ಸೇರಿರುವ ಕಾರಣ, ಇದೇ ಹಗರಣದಲ್ಲಿ ಬಂಧಿತರಾಗಿ ಈಗಷ್ಟೇ ಜೈಲಿನಿಂದ ಹೊರಬಂದಿರುವ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ದೆಹಲಿ ಮತ್ತು ಹರ್ಯಾಣದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಪ್ರಚಾರದ ನೇತೃತ್ವ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ನಿಮಿತ್ತ ಸಿಸೋಡಿಯಾ ಭಾನುವಾರ ತಮ್ಮ ನಿವಾಸದಲ್ಲಿ ಪಕ್ಷದ ಹಿರಿಯರ ಸಭೆ ನಡೆಸಿದರು. ಈ ವರ್ಷಾಂತ್ಯಕ್ಕೆ ಹರಿಯಾಣ ಚುನಾವಣೆಯಲ್ಲಿ 90 ಕ್ಷೇತ್ರಗಳಿಗೆ ಹಾಗೂ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ದೆಹಲಿ ಚುನಾವಣೆಯಲ್ಲಿ 70 ಕ್ಷೇತ್ರಗಳಿಗೆ ಆಪ್ ಸ್ಪರ್ಧೆ ಸಾಧ್ಯತೆ ಇದೆ. ಒಟ್ಟಾರೆ ಸದ್ಯದ ಪರಿಸ್ಥಿತಿ ಗಮನಿಸಿದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಟಕ್ಕರ್ ಕೊಡಲು ಆಮ್ ಆದ್ಮಿ ಪಕ್ಷ ಸಜ್ಜಾದಂತಿದೆ.