ಗರ್ಭಿಣಿ ಮಹಿಳೆಯನ್ನು ನೇಣು ಹಾಕಿ ಕೊಂದ ಪಾಪಿಗಳು..!
ಕೊಲೆಯಾಗಿ ನಾಲ್ಕು ದಿನಗಳಾದ್ರು ಆಗಿಲ್ಲವಂತೆ FIR..?
ಕೊಲೆಗಡುಕರಿಗೆ ಶ್ರೀರಕ್ಷೆಯಾಗಿ ನಿಂತ್ರಾ ಕಾಕತಿ ಪೊಲೀಸರು ..?
ಬೆಳಗಾವಿಯಲ್ಲೇ ಸರಕಾರವಿದ್ರು ಬಡವರಿಗೆ ಸಿಗುತ್ತಿಲ್ಲ ನ್ಯಾಯ..!
ಬೆಳಗಾವಿ : ಮೂರು ತಿಂಗಳು ತುಂಬು ಗರ್ಭಿಣಿಯನ್ನು ಗಂಡನ ಮನೆಯವರು ಮಾರಣಾಂತಿಕವಾಗಿ ಹಲ್ಲೆ ಮಾಡಿ ಮನೆಯಲ್ಲೇ ನೇಣು ಹಾಕಿ ಕೊಲೆ ಮಾಡಿರುವ ಮನಃಕಲುಕುವ ದುರಂತ ಘಟನೆ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಶನಿವಾರ ಹಾಡಹಗಲೇ ನಡೆದಿದೆ. ಕೊಲೆ ಮಾಡಿ ಜೈಲಿನಲ್ಲಿರಬೇಕಾಗಿದ್ದ ಆರೋಪಿಗಳು ಮಾತ್ರ ಪೊಲೀಸರೊಂದಿಗೆ ಡಿಲ್ ಮಾಡಿಕೊಂಡು ಬಿಂದಾಸ್ ಆಗಿ ಇದ್ದು ಜನರು ಪೊಲೀಸ್ ಇಲಾಖೆಗೆ ಹಿಡಿ ಶಾಪ ಹಾಕುವಂತಹ ಘಟನೆ ಬೆಳಗಾವಿ ಕಮೀಷನರೇಟ್ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸ ವಟಮೂರಿ ಗ್ರಾಮದ 22 ವರ್ಷದ ಎರಡನೇ ಮಗುವಿಗೆ 3 ತಿಂಗಳು ಗರ್ಭಿಣಿಯಾಗಿದ್ದ ಗೌರಮ್ಮಾ ಮಂಜುನಾಥ ಕೊಣ್ಣೂರಿ ಕೊಲೆಯಾದ ಮಹಿಳೆ.
ಹಳೆ ಹೊಸೂರ ಗ್ರಾಮದ ಪಕ್ಕಿರಪ್ಪಾ ಹಾಗೂ ಹನುಮವ್ವಾ ವರದ ದಂಪತಿಗಳು ಅವರ ಕಿರಿಯ ಪುತ್ರಿ ಗೌರಮ್ಮನ್ನು ಮೂರು ವರ್ಷದ ಹಿಂದೆ ಹೊಸ ವಂಟಮೂರಿ ಗ್ರಾಮದ ಮಂಜುನಾಥ ಯಲ್ಲಪ್ಪಾ ಕೊಣ್ಣೂರಿ ಜತೆ ಮದುವೆ ಮಾಡಿದ್ದರು.
ಮದುವೆಯಾದಾಗಿನಿಂದಲೂ ಗಡನಮನೆಯವರು ಗೌರಮ್ಮಗೆ ಕಿರುಕುಳ ನೀಡುತ್ತಿದ್ದರು. ಈ ಮಧ್ಯೆ ಅವಳು ಕಿರುಕುಳ ತಾಳಲಾರದೆ ಹಲವು ಬಾರಿ ತವರು ಮನೆಗೆ ಬಂದಾಗ ಆಕೆಯ ಪತಿ ಹಾಗೂ ಮೈದುನ ಬಂದು ಮತ್ತೆ ಕರೆದುಕೊಂಡು ಹೋಗುತ್ತಿದ್ದರು. ಇವರಿಗೆ ಒಂದೂವರೆ ವರ್ಷದ ಗಂಡು ಮಗು ಇದ್ದು ಗೌರಮ್ಮ ಎರಡನೇ ಮಗುವಿಗಾಗಿ ಮೂರು ತಿಂಗಳು ಗರ್ಭಿಣಿಯಾಗಿದ್ದಳು.
ಶನಿವಾರ ಬೆಳಗ್ಗೆ ಗೌರಮ್ಮನನ್ನು ಗಂಡ ಮಂಜುನಾಥ ಹಾಗೂ ಮಾವ
ಯಲ್ಲಪ್ಪಾ ಸಿದ್ದಪ್ಪಾ ಕೊಣ್ಣೂರಿ ಅತ್ತೆ
ರೇಣುಕಾ ಯಲ್ಲಪ್ಪಾ ಕೊಣ್ಣೂರಿ ಮೂವರು ಸೇರಿಕೊಂಡು ಮನಬಂದಂತೆ ತಳಿಸಿದ್ದಾರೆ. ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ನಂತರ ಇದು ಕೊಲೆ ಎಂದು ಗೊತ್ತಾಗದಂತೆ ಅವಳನ್ನು ಮನೆಯಲ್ಲೆ ನೇಣು ಹಾಕಿ ಕೊಲೆ ಮಾಡಿದ್ದಾರೆ.
ಶನಿವಾರ ಮಧ್ಯಾಹ್ನ 1 ಗಂಟೆಗೆ ಹೊಸ ವಂಟಮೂರಿ ಲಕ್ಷ್ಮಿ ಗಲ್ಲಿ ಗಂಡನ ಮನೆಯಲ್ಲಿ ಈ ಘಟನೆ ನಡೆದಿರುವುದಾಗಿ ಅಲ್ಲಿನವರು ತಿಳಿಸಿದ್ದಾರೆ. ಆದರೆ ಪೊಲೀಸರು ಮಾತ್ರ ಸಾಯಂಕಾಲ ನಾಲ್ಕು ಘಂಟೆಗೆ ಅಲ್ಲಿಗೆ ಬಂದಿದ್ದಾರೆ. ಅದಲ್ಲದೇ ಸಂಜೆ 6 ಗಂಟೆಯಾದ್ರು ತವರು ಮನೆಯವರಿಗೆ ಮಾಹಿತಿ ಕೂಡ ಕೊಟ್ಟಿಲ್ಲ. ಸ್ಥಳಿಯರು ಮಾಹಿತಿ ನೀಡಿದ ಮೇಲೆ ತವರು ಮನೆಯವರು ಬಂದು ಮೃತ ಮಗಳನ್ನು ಕಂಡು ದಿಗ್ಭ್ರಾಂತರಾಗಿದ್ದಾರೆ.
ತವರು ಮನೆಯವರು ಬರುತ್ತಿದ್ದಂತೆ ಗಂಡನ ಮನೆಯವರು ಪರಾರಿಯಾಗಿದ್ದಾರೆ. ನಂತರ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಅಲ್ಲಿದ್ದ ಕೆಲ ಸಿಬ್ಬಂದಿಗಳು ಪರಿಸ್ಥಿತಿ ಹತೋಟಿಗೆ ತರಲು ಯತ್ನಿಸಿದರು ಯಶಸ್ವಿಯಾಗಿಲ್ಲ. ಇಷ್ಟೇಲ್ಲಾ ನಡೆದರು ಕಾಕತಿ ಠಾಣೆ ಮುಖ್ಯಸ್ಥ ಮಾತ್ರ ಎಲ್ಲ ಮಗಿದ ಮೇಲೆ ಘಟನೆ ನಡೆದ ಸ್ಥಳಕ್ಕೆ ಬಂದಿರುವುದಾಗಿ ತವರು ಮನೆಯರು ಆರೋಪಿಸಿದ್ದಾರೆ.
ಅದಲ್ಲದೆ ಸಾಕ್ಷಿ ನಾಶಪಡಿಸಲು ಹಾಗೂ ನಮ್ಮ ಮೇಲೆ ಪ್ರತಿದೂರು ಹಾಕಲು ಕೆಲವರು ಪ್ಲ್ಯಾನ್ ಮಾಡಿ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ಕೊಲೆಯಾದ ಮಹಿಳೆ ತವರು ಮನೆಯವರು ಆರೋಪಿಸಿದ್ದಾರೆ.
ಮಗಳು ಗೌರಮ್ಮಾ ಕೊಲೆಯಾಗಿ ನಾಲ್ಕು ದಿನಗಳಾದ್ರು ಅವರ ಕುಟುಂಬಕ್ಕೆ ಕಾಕತಿ ಪೊಲೀಸರು ಇನ್ನೂ FIR ಪ್ರತಿ ಕೊಟ್ಟಿಲ್ಲಾ. ಕೇಳಿದರೆ ಮುಖ್ಯಮಂತ್ರಿಗಳು ಹೋದ ಮೇಲೆ ಕೊಡುತ್ತೇವೆ ಎಂದು ನಮ್ಮನ್ನೆ ಹೆದರಿಸುತ್ತಿದ್ದಾರೆ ಎಂದು ಹೇಳಿ ಮಹಿಳೆ ತಾಯಿ ಹನುಮವ್ವಾ ಹಾಗೂ ತಂದೆ ಪಕಿರಪ್ಪಾ ವರದ
ಕಣ್ಣಿರಿಡುತ್ತಿದ್ದಾರೆ.
ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಶವ ಪರೀಕ್ಷೆ ನಡೆದಿದ್ದರೂ ಇನ್ನೂ FIR ಆಗಿಲ್ಲ ಎಂದು ಪೊಲೀಸರು ಹೇಳುತ್ತಿರುವುದೇಕೆ.? ಅದಲ್ಲದೆ ಆರೋಪಿಗಳನ್ನು ಬಂಧಿಸದೆ ಅವರನ್ನು ಬಿಂದಾಸಾಗಿ ಬಿಟ್ಟಿದ್ದೇಕೆ..?
ಮಖ್ಯಮಂತ್ರಿಗಳು ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿರುವುದು ಜನರಿಗೆ ನ್ಯಾಯ ಒದಗಿಸಲು ಅಂತಹದರಲ್ಲಿ ಮಹಿಳೆ ಮೇಲೆ ಇಂತಹ ಘೋರ ನಡೆದರು ಇದನ್ನು ಮುಚ್ಚಿಹಾಕಿ ಅಲ್ಲಿನ ಪೊಲೀಸಪ್ಪ ಯಾವ ಡೀಲ್ ಮಾಡುತ್ತಿದ್ದಾನೆ ಎಂದು ಹಳೆ ಹೊಸೂರ ಗ್ರಾಮಸ್ಥರು ಕೆಂಡಾಮಂಡಲವಾಗಿದ್ದಾರೆ.