83 ರಲ್ಲಿ ರಾಮಕೃಷ್ಣ ಹೆಗಡೆ
ಸರಕಾರ ಮೊಟ್ಟ ಮೊದಲು ಸ್ಥಾಪಿಸಿದ ಕನ್ನಡ ಕಾವಲು ಸಮಿತಿಯ ಪ್ರಥಮ
ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು
ಗಡಿನಾಡು ಮತ್ತು ಹೊರನಾಡು ಕನ್ನಡಿಗರತ್ತ ಗಮನ ಹರಿಸಿದ್ದಾರೆ.
ರಾಜ್ಯ ಸರಕಾರ ಒದಗಿಸಬೇಕಾದ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ ವರದಿ ಮಂಡಿಸುವಂತೆ ಮುಖ್ಯಮಂತ್ರಿಗಳು
ಇದೇ ಜೂನ್ 26 ರಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ
ಪತ್ರ ಬರೆದಿದ್ದಾರೆ.
ಈ ಸೂಚನೆಯ ಮೇರೆಗೆ ಮುಖ್ಯ ಕಾರ್ಯದರ್ಶಿಗಳು ಉನ್ನತ ಶಿಕ್ಷಣ, ಶಾಲಾ ಶಿಕ್ಷಣ,ಸಮಾಜ ಕಲ್ಯಾಣ ಇಲಾಖೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ
ಹಿರಿಯ ಅಧಿಕಾರಿಗಳಿಗೆ ಜೂನ್ 27 ರಂದು ಪತ್ರ ಬರೆದಿದ್ದು ವರದಿ ಕೇಳಿದ್ದಾರೆ.
ಕರ್ನಾಟಕದ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ,ಆಂಧ್ರಪ್ರದೇಶ,
ತೆಲಂಗಾಣ,ಕೇರಳ, ತಮಿಳುನಾಡು ಮತ್ತು ಗೋವೆ
ಕನ್ನಡಿಗರು ಎದುರಿಸುತ್ತಿರುವ
ಸಮಸ್ಯೆಗಳ ಬಗ್ಗೆ ಅಲ್ಲಿಯ ಕನ್ನಡಿಗರು ಮೇಲಿಂದ ಮೇಲೆ ರಾಜ್ಯ ಸರಕಾರದ
ಗಮನ ಸೆಳೆಯುತ್ತಲೇ ಬಂದಿದ್ದಾರೆ.
ಹಿಂದಿನ ಬೊಮ್ಮಾಯಿ ಸರಕಾರದ ಅವಧಿಯಲ್ಲಿ ಈ ಆರು ರಾಜ್ಯಗಳ
ಕನ್ನಡಿಗರ ಪ್ರಾತಿನಿಧಿಕ ಸಭೆಯೂ ಕಳೆದ
ಜನೇವರಿ 25 ರಂದು ಬೆಂಗಳೂರಿನ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ನಡೆದಿತ್ತು. ನಂತರ ಸಮಗ್ರ ವರದಿಯನ್ನು ಫೆಬ್ರುವರಿ 2 ರಂದು ಬೊಮ್ಮಾಯಿ
ಅವರಿಗೆ ಸಲ್ಲಿಸಲಾಗಿತ್ತು.
ಪ್ರಸಕ್ತ ಸರಕಾರದಲ್ಲಿ ಗಡಿನಾಡು
ಮತ್ತು ಹೊರನಾಡು ಕನ್ನಡಿಗರ ಸಮಸ್ಯೆಗಳ ಚರ್ಚೆ ನಡೆಯುತ್ತಿದ್ದು ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರು ವರದಿ ಕೇಳಿರುವದು ಸಕಾರಾತ್ಮಕ ಹೆಜ್ಜೆಯಾಗಿದೆ.
ಹೊರನಾಡ ಕನ್ನಡಿಗರ ಮಕ್ಕಳಿಗೆ ಕರ್ನಾಟಕದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಪ್ರತಿಶತ 5 ರಿಂದ 10 ರಷ್ಟು
ಮೀಸಲಾತಿ ಒದಗಿಸಬೇಕೆಂಬುದೂ
ಸಹ ಒಂದು ಪ್ರಮುಖ ಬೇಡಿಕೆಯಾಗಿದೆ.
ಮುಖ್ಯಮಂತ್ರಿಗಳೇ ಮುಂದಾಗಿ
ಗಡಿನಾಡು ಮತ್ತು ಹೊರನಾಡು ಕನ್ನಡಿಗರ ಸಭೆ ಕರೆದು ಸಮಗ್ರವಾಗಿ ಚರ್ಚಿಸಬೇಕೆಂದು
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ
ಚಂದರಗಿ ಅವರು ಆಗ್ರಹಿಸಿದ್ದಾರೆ.
ಈ
ಸಂಬಂಧ ಮುಖ್ಯಮಂತ್ರಿಗಳಿಗೆ ಶೀಘ್ರವೇ ಪತ್ರವೊಂದನ್ನು ಬರೆಯಲಾಗುವುದು ಎಂದು ಬೆಳಗಾವಿಯ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ
ತಿಳಿಸಿದ್ದಾರೆ.