ಬೆಂಗಳೂರು : ಡೀಸೆಲ್, ವಿದ್ಯುತ್, ಹಾಲು ಬೆಲೆ ಏರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ಮದ್ಯದ ದರವನ್ನೂ ಹೆಚ್ಚಿಸಲು ಮುಂದಾಗಿದೆ. ಬ್ರಾಂಡಿ, ವಿಸ್ಕಿ, ರಮ್, ಜಿನ್ ಮುಂತಾದ ಮದ್ಯಗಳ ದರವನ್ನು ಪ್ರತಿ ಕ್ವಾರ್ಟ್ರಗೆ 10 ರಿಂದ 15 ರು.ವರೆಗೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಇನ್ನು ಬಿಯರ್ ದರವನ್ನು ಎಲ್ಲಾ ವರ್ಗಗಳಲ್ಲಿ ಶೇ.10ರಷ್ಟು ಹೆಚ್ಚಿಸಲು ಮುಂದಾಗಿದೆ.
ಅಬಕಾರಿ ಇಲಾಖೆ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ನಾಗರಿಕರಿಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಿದೆ. ಮಧ್ಯಮ ಶ್ರೇಣಿಯ ಮದ್ಯಕ್ಕೂ ತುಸು ಪ್ರಮಾಣ ದಲ್ಲಿ ದರ ಏರಿಕೆ ಆಗಲಿದೆ. ಆದರೆ, ಹೈ ಎಂಡ್ (ಅಥವಾ ಪ್ರೀಮಿಯಂಬ್ರಾಂಡ್) ಮದ್ಯಗಳ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ.
ವೈನ್, ಫೆನ್ನಿ ಸೇರಿ ಕೆಲ ಮದ್ಯಗಳನ್ನು ದರ ಏರಿಕೆಯಿಂದ ಹೊರಗಿಡಲಾಗಿದೆ.
₹40 ಸಾವಿರ ಕೋಟಿ ಆದಾಯದ
ಗುರಿ: ರಾಜ್ಯದ ಆರ್ಥಿಕ ಗುರಿಗಳನ್ನು ಸಾಧಿಸಲು ಮದ್ಯ ಮಾರಾಟದಿಂದ 40 ಸಾವಿರ ಕೋಟಿ ರು. ಆದಾಯ ಸಂಗ್ರಹ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಸದ್ಯ ಬಿಯರ್ ಮೇಲಿನ ಎಇಡಿಯು ಉತಾ ದನಾ ವೆಚ್ಚದ ಶೇ.195ರಷ್ಟಿದೆ. ಇದೀಗ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.205ಕ್ಕೆ ಹೆಚ್ಚಿಸುವ ಬಗ್ಗೆ ಅಧಿಸೂಚನೆ ಯಲ್ಲಿ ಉಲ್ಲೆಖಿಸಲಾಗಿದೆ. ಇದರೊಂದಿಗೆ ಪ್ರೀಮಿಯಂ ಅಥವಾ ಇತರೆ ಬಿಯರ್ ಬ್ರಾಂಡ್ಗಳ ಬೆಲೆಯು ಉತ್ಪಾದನಾ ವೆಚ್ಚವನ್ನು ಅವಲಂಬಿಸಿ ಪ್ರತಿ ಬಾಟಲಿಗೆ ಸರಾಸರಿ 10ರಿಂದ 20 ರು. ಏರಿಕೆ ಆಗಬಹುದೆಂದು ಅಂದಾಜಿಸಲಾಗಿದೆ.