ಬೆಂಗಳೂರು:
ಲೋಕಸಭಾ ಚುನಾವಣೆಗೆ ಏಳು ತಿಂಗಳು ಮಾತ್ರ ಬಾಕಿ ಉಳಿದಿದ್ದು, ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಖಚಿತವಾಗಿದೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣೆಗೆ ತಯಾರಿ ಆರಂಭಿಸಿದೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ 28 ಮಂದಿ ಸಚಿವರನ್ನು ವೀಕ್ಷಕರನ್ನಾಗಿ ನೇಮಿಸಿದೆ.
ಲೋಕಸಭಾ ಚುನಾವಣೆಗೆ ಸಂಬಂಧಿಸಿ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಎಲ್ಲಾ ಹಂತದ ನಾಯಕರನ್ನು ಸಂಪರ್ಕಿಸಿ, ಸಭೆಗಳನ್ನು ಆಯೋಜಿಸಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಮಾಹಿತಿಗಳನ್ನು ಕಲೆಹಾಕುವ ಜವಾಬ್ದಾರಿಯನ್ನು ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ವೀಕ್ಷಕರಾಗಿ ನೇಮಕವಾದ ಸಚಿವರಿಗೆ ಜವಾಬ್ದಾರಿ ನೀಡಿದ್ದಾರೆ. ವೀಕ್ಷಕರು ತಮಗೆ ವಹಿಸಿದ ಕ್ಷೇತ್ರದ ಪ್ರವಾಸ ಮಾಡಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಕೆಪಿಸಿಸಿಗೆ ವರದಿ ನೀಡುವಂತೆ ಸೂಚಿಸಲಾಗಿದೆ.
ಯಾವ ಲೋಕಸಭಾ ಕ್ಷೇತ್ರಕ್ಕೆ ಯಾವ ಸಚಿವರು ವೀಕ್ಷಕರು?
ಬಾಗಲಕೋಟೆ – ಪ್ರಿಯಾಂಕ ಖರ್ಗೆ
ಬೆಂಗಳೂರು ಕೇಂದ್ರ – ಎನ್.ಎಸ್. ಬೋಸರಾಜು
ಬೆಂಗಳೂರು ಉತ್ತರ – ಡಾ ಜಿ. ಪರಮೇಶ್ವರ
ಬೆಂಗಳೂರು ಗ್ರಾಮಾಂತರ – ಕೆ.ವೆಂಕಟೇಶ
ಬೆಂಗಳೂರು ದಕ್ಷಿಣ – ಡಾ. ಶರಣಪ್ರಕಾಶ ಪಾಟೀಲ
ಬೆಳಗಾವಿ – ಶಿವರಾಜ ತಂಗಡಗಿ
ಕಲಬುರ್ಗಿ- ಬಿ.ನಾಗೇಂದ್ರ
ಬೀದರ – ಸಂತೋಷ ಲಾಡ್
ವಿಜಯಪುರ – ಸತೀಶ ಜಾರಕಿಹೊಳಿ
ಚಾಮರಾಜನಗರ – ದಿನೇಶ ಗುಂಡೂರಾವ್
ಚಿಕ್ಕಬಳ್ಳಾಪುರ – ಜಮೀರ್ ಅಹ್ಮದ್ಖಾನ್
ಚಿಕ್ಕೋಡಿ – ಡಿ.ಸುಧಾಕರ
ಚಿತ್ರದುರ್ಗ – ಎಚ್.ಸಿ. ಮಹದೇವಪ್ಪ
ದಕ್ಷಿಣ ಕನ್ನಡ – ಮಧು ಬಂಗಾರಪ್ಪ
ದಾವಣಗೆರೆ – ಈಶ್ವರ ಖಂಡ್ರೆ
ಧಾರವಾಡ – ಲಕ್ಷ್ಮೀ ಹೆಬ್ಬಾಳ್ಕರ್
ಬಳ್ಳಾರಿ – ಶಿವಾನಂದ ಪಾಟೀಲ
ಹಾಸನ – ಎನ್. ಚಲುವರಾಯಸ್ವಾಮಿ
ಹಾವೇರಿ – ಎಸ್.ಎಸ್. ಮಲ್ಲಿಕಾರ್ಜುನ
ಕೋಲಾರ – ರಾಮಲಿಂಗಾರೆಡ್ಡಿ
ಕೊಪ್ಪಳ – ಆರ್.ಬಿ. ತಿಮ್ಮಾಪುರ
ಮಂಡ್ಯ – ಡಾ ಎಂ.ಸಿ. ಸುಧಾಕರ
ಮೈಸೂರು – ಬೈರತಿ ಸುರೇಶ
ರಾಯಚೂರು – ಕೆ.ಎಚ್. ಮುನಿಯಪ್ಪ
ಶಿವಮೊಗ್ಗ – ಕೆ.ಎನ್. ರಾಜಣ್ಣ
ತುಮಕೂರು – ಕೃಷ್ಣ ಬೈರೇಗೌಡ
ಉಡುಪಿ & ಚಿಕ್ಕಮಗಳೂರು – ಮಂಕಾಳ ವೈದ್ಯ
ಉತ್ತರ ಕನ್ನಡ – ಎಚ್.ಕೆ. ಪಾಟೀಲ ಅವರನ್ನು ವೀಕ್ಷರನ್ನಾಗಿ ನೇಮಕ ಮಾಡಲಾಗಿದೆ.