ಬೆಳಗಾವಿ: ಬೆಳಗಾವಿ ಶಿವಗಿರಿ ಕೋ ಅಪ್ ಕ್ರೆಡಿಟ್ ಸೊಸೈಟಿಯ ರಜತ ಸಂಭ್ರಮ ಫೆಬ್ರವರಿ 9 ರಂದು ಸಂಜೆ 5:00 ಗಂಟೆಗೆ ಇಲ್ಲಿನ ಭಾಗ್ಯನಗರ 1 ನೇ ಕ್ರಾಸ್ ರಾಮನಾಥ ಮಂಗಳ ಕಾರ್ಯಾಲಯದಲ್ಲಿ ನಡೆಯಲಿದೆ.
ನಿಪ್ಪಾಣಿ ಓಂ ಶಕ್ತಿ ದೇವಸ್ಥಾನ ಪೀಠದ ಮಹಾಕಾಳಿ ಮಹಾಸಂಸ್ಥಾನದ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡುವರು. ಭಾರತ್ ಕೋ ಅಫ್ ಬ್ಯಾಂಕ್ ಮುಂಬೈ ಅಧ್ಯಕ್ಷ ಸೂರ್ಯಕಾಂತ ಸುವರ್ಣ ಉದ್ಘಾಟಿಸುವರು. ಬೆಳಗಾವಿ ಶಿವಗಿರಿ ಸೊಸೈಟಿ ಅಧ್ಯಕ್ಷ ಸೃಜನ್ ಕುಮಾರ್ ಅಧ್ಯಕ್ಷತೆ ವಹಿಸುವರು. ಉದ್ಯಮಿ ವಿಠ್ಠಲ ಹೆಗ್ಡೆ, ಬೆಳಗಾವಿ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ಅಜಯ್ ಪೈ, ಬಂಟರ ಸಂಘದ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಬಿಲ್ಲವರ ಅಸೋಸಿಯೇಷನ್ ಅಧ್ಯಕ್ಷ ಸುನಿಲ್ ಪೂಜಾರಿ, ಮೂಲ್ಯ ಯಾನೆ ಕುಲಾಲರ ಸಂಘದ ಸ್ಥಾಪಕ ಅಧ್ಯಕ್ಷ ರಮೇಶ ಟಿ. ಮೂಲ್ಯ ಉಪಸ್ಥಿತರಿರುವರು.
ಹುಕ್ಕೇರಿ ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ, ಉಡುಪಿ ಕೋಟ ಪಡುಕೆರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕಿ ಡಾ.ಸುನೀತಾ ವಿ., ಬೆಳಗಾವಿಯ ಆಶೀರ್ವಾದ ಗ್ರೂಪ್ ಆಫ್ ಹೋಟೆಲ್ ಯುವ ಉದ್ಯಮಿ ಪ್ರಭಾಕರ ಶೆಟ್ಟಿ, ಬೆಳಗಾವಿಯ ರಾಷ್ಟ್ರ ದೇಹದಾರ್ಢ್ಯ ಸಂಘಟನೆಯ ಅಂತರಾಷ್ಟ್ರೀಯ ತೀರ್ಪುಗಾರ ಅಜಿತ ಸಿದ್ದಣ್ಣವರ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ಸೊಸೈಟಿ ಅಧ್ಯಕ್ಷ ಸೃಜನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.