ಬೆಳಗಾವಿ : ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ ದರ್ಶನಕ್ಕೆ ಹೋಗಿದ್ದ ಬಿಜೆಪಿ ಶಾಸಕ ಪ್ರಭು ಚವ್ಹಾಣ್ಗೆ ಅಡ್ಡಿಪಡಿಸಿದ ಘಟನೆ ಬುಧವಾರ ನಡೆದಿದೆ. ಶಿವಸೇನೆ ಮುಖಂಡ ವಿಜಯ್ ದೇವಣೆ ನೇತೃತ್ವದಲ್ಲಿ ಅಡ್ಡಿಪಡಿಸಿದ್ದು, ಅಧಿವೇಶನ ವೇಳೆ ಮಹಾಮೇಳಾವಕ್ಕೆ ಕರ್ನಾಟಕ ಅವಕಾಶ ಕೊಟ್ಟಿಲ್ಲವೆಂದು ಎಂದು ಹೇಳಿದ್ದಾರೆ. ಪ್ರಭು ಚವ್ಹಾಣ್ ಕನ್ನಡದಲ್ಲಿ ಉತ್ತರ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಎಂಇಎಸ್ ಪ್ರತಿಭಟನೆಗೆ ಬ್ಯಾನ್ ಮಾಡಿದ್ದಾರೆ ಎಂದಿದ್ದಾರೆ.
ಮಹಾಮೇಳಾವ್ ಗೆ ಅವಕಾಶ ಕೊಡದ ಕಾರಣ ಕರ್ನಾಟಕದ ರಾಜಕಾರಣಿಗಳಿಗೆ ಮಹಾರಾಷ್ಟ್ರ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಶಿವಸೇನೆ ಉದ್ದವ ಠಾಕ್ರೆ ಬಣದ ವಿಜಯ ದೇವಣೆ ಹೇಳಿದ್ದರು.