ಬೆಳಗಾವಿ : ಮುಂದಿನ ವರ್ಷ ಜ.18 ರಂದು ಉಡುಪಿ ಕೃಷ್ಣಮಠದಲ್ಲಿ ಪರ್ಯಾಯ ಪೀಠಾರೋಹಣಗೈಯ್ಯಲಿರುವ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸಂಪ್ರದಾಯದಂತೆ ಪರ್ಯಾಯ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ದೇಶದ ಪುಣ್ಯಕ್ಷೇತ್ರಗಳ ಸಂದರ್ಶನ ನಡೆಸುತ್ತಿದ್ದಾರೆ.
ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ ಸಂಚಾರ ನಡೆಸಿದ ಶ್ರೀಗಳು ಬೆಳಗಾವಿ ನಗರದ ಕೃಷ್ಣಮಂದಿರಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಸಮಸ್ತ ಭಕ್ತರು ಮತ್ತು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಶ್ರೀಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಶೀರೂರು ಮಠದ ಪಾರುಪತ್ಯಗಾರರಾದ ಶ್ರೀಶ ಭಟ್ ಕಡೆಕಾರ್, ಬೆಳಗಾವಿಯ ಪ್ರಮುಖ ಭಕ್ತರಾದ ಗುರುರಾಜಾಚಾರ್ ಜೋಶಿ, ಪ್ರಮೋದ ಆಚಾರ್ ಕಟ್ಟಿ, ಶ್ರೀನಿವಾಸಾಚಾರ್ ಹೊನ್ನಿದಿಬ್ಬ ಮುಂತಾದವರು ಉಪಸ್ಥಿತರಿದ್ದರು.