ಮುಂಬೈ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ 45 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ, ಏಕನಾಥ ಶಿಂಧೆ ಅವರು ಠಾಣೆಯ ಕೊಪ್ತಿ ಪಂಚಮಖೇಡಿ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ. 2022ರ ಜೂನ್ ನಲ್ಲಿ ಆಗ ಮುಖ್ಯಮಂತ್ರಿ ಆಗಿದ್ದ ಶಿವಸೇನೆಯ ಉದ್ದವ ಠಾಕ್ರೆ ವಿರುದ್ಧ ಬಂಡಾಯವೆದ್ದ ಏಕನಾಥ ಶಿಂಧೆ ಬೆಂಬಲಿಗ ಎಲ್ಲಾ ಶಾಸಕರು ಟಿಕೆಟ್ ಪಡೆದಿರುವುದು ವಿಶೇಷ. ಹೆಚ್ಚಿನ ಸಂಪುಟ ಸದಸ್ಯರು ಈ ಮೊದಲು ಪ್ರತಿನಿಧಿಸಿದ ಕ್ಷೇತ್ರಗಳಲ್ಲಿ ಟಿಕೆಟ್ ಪಡೆದುಕೊಂಡಿದ್ದಾರೆ.
ಈ ಮೂಲಕ ಉದ್ಧವ ಠಾಕ್ರೆ ಬಣದಿಂದ ತಮ್ಮ ಬಣಕ್ಕೆ ವಲಸೆ ಬಂದ ಎಲ್ಲಾ ಶಾಸಕರಿಗೂ ಏಕನಾಥ ಶಿಂಧೆ ಅವರು ಟಿಕೆಟ್ ನೀಡುವ ಮೂಲಕ ತಾವು ಕೊಟ್ಟ ವಚನವನ್ನು ಉಳಿಸಿಕೊಂಡಿದ್ದಾರೆ.
ಮಹಾ ಚುನಾವಣೆಗೆ ಸಿಎಂ ಕ್ಷೇತ್ರ ಘೋಷಣೆ : ಕೊಟ್ಟ ಮಾತು ತಪ್ಪದ ಶಿಂಧೆ
