ಮಾರಿಹಾಳ ಪೊಲೀಸರಿಂದ ಕುರಿ ಕಳ್ಳರ ಬಂಧನ..!
ಕಾಕತಿ, ಕ್ಯಾಂಪ್ ಹಾಗೂ ಮಹಾರಾಷ್ಟ್ರದಲ್ಲಿ ಬೈಕ್ ಕದ್ದವರಿಗೆ ಬಿತ್ತು ಕೊಳ..!
ಮಾರಿಹಾಳ PSI ತಂಡದಿಂದ ಮಿಂಚಿನ ಕಾರ್ಯಾಚರಣೆ..!
ಬೆಳಗಾವಿ : ಮಾರಿಹಾಳ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ದಿನಾಂಕ 06-11-2023 ರಂದು ಸಾಯಂಕಾಲ 4-00 ಗಂಟೆಯಿಂದ 7.00 ಗಂಟೆಯ ನಡುವಿನ ಅವಧಿಯಲ್ಲಿ ಬೆಳಗಾವಿ ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ಮನೆಯ ಮುಂದೆ ಕಟ್ಟಿದ್ದ ಸುಮಾರು 11.000/-ರೂ ಕಿಮ್ಮತ್ತಿನ ಒಂದು ಆಡು ಮತ್ತು ಒಂದು ಹೋತ ಇವುಗಳನ್ನು ಕಳ್ಳರು ಕಳ್ಳತನ ಮಾಡಿದ್ದ ಪ್ರಕರಣವನ್ನು ಮಾರಿಹಾಳ ಪೊಲೀಸ ಠಾಣೆ ಪಿಎಸ್ಐ ಮಂಜುನಾಥ ನಾಯಿಕ ಹಾಗೂ ತಂಡ ಆ ಖದಿಮ ಕಳ್ಳರನ್ನು ಬಂಧಿಸಿ ಕುರಿ, ಹೋತ ಅಷ್ಟೇ ಅಲ್ಲದೆ ಈ ಹಿಂದೆ ಕಳ್ಳತನಲ್ಲಿ ಕದ್ದ ಮಾಡಿದ್ದ ಲಕ್ಷಾಂತರ ರೂ ವಸ್ತುಗಳನ್ನು ವಶಪಡಿಸಿಕೊಂಡು ಕಳ್ಳರನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಿ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಲ್ಲದೇ ಆರೋಪಿತರು ಈ ಹಿಂದೆ ಮಹಾರಾಷ್ಟ್ರದ ಚಂದಗಡ, ಬೆಳಗಾವಿ ಕ್ಯಾಂಪ ಮತ್ತು ಕಾಕತಿ ಹಾಗೂ ವಿವಿಧ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಮೋಟರ ಸೈಕಲಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದರಿಂದ ಸದರಿ ಆರೋಪಿಗಳಾದ..
1) ಸಾಹೀಲ ಮಹಮ್ಮದ ಬೆಟಗೇರಿ, ವಯಾ: 19 ವರ್ಷ ಸಾ: ಬ್ಲಾಕ ನಂ: 10 ಮನೆ ನಂ: 10 ಶ್ರೀನಗರ ಬೆಳಗಾವಿ.
2) ಗಣೇಶ ಶಿವಪ್ಪ ಕೊಳವಿ, ವಯಾ: 18 ವರ್ಷ, ಸಾ: ಮನೆ ನಂ: 116 ಸುಣಕುಂಪಿ ತಾ: ಬೈಲಹೊಂಗಲ ಜಿ: ಬೆಳಗಾವಿ, ಹಾಲ|| ಬಸವ ಕಾಲನಿ ಬಾಕೈಟ್ ರೋಡ ಇಂಡಾಲ ಬೆಳಗಾವಿ,
3) ಪ್ರಜ್ವಲ್ ನಾಗರಾಜ ಹಿರೇಮನಿ, ವಯಾ: 20 ವರ್ಷ, ಸಾ: ಲಕ್ಕಲಕಟ್ಟಿ ತಾ: ಗಜೇಂದ್ರಗಡ ಜಿ: ಗದಗ ಹಾಲಿ: 3ನೇ ರೇಲ್ವೇ ಗೇಟ ಹತ್ತಿರ ಬೆಳಗಾವಿ ಇವರಿಂದ ಕಳ್ಳತನ ಮಾಡಿದ ಸುಮಾರು 1.75.000/- ರೂ ಕಿಮ್ಮತ್ತಿನ 05 ಮೋಟರ ಸೈಕಲಗಳನ್ನು ಹಾಗೂ 9.500/-ರೂ ಹಣವನ್ನು ವಶಪಡಿಸಿಕೊಂಡು ದಸ್ತಗೀರ ಮಾಡಿ ನ್ಯಾಯಾಲಯಕ್ಕೆ ಹಾಜರಪಡಿಸಿದ್ದಾರೆ.
DCP ಸ್ನೇಹಾ ಪಿ.ವಿ (ಅಪರಾಧ ಮತ್ತು ಸಂಚಾರ) ಮಾರ್ಗದರ್ಶನಲ್ಲಿ , ಎಸ್ ವಿ ಗಿರೀಶ, ಎಸಿಪಿ ಬೆಳಗಾವಿ ಗ್ರಾಮೀಣ ಉಪವಿಭಾಗ ಬೆಳಗಾವಿ, ಗುರುರಾಜ ಕಲ್ಯಾಣಶೆಟ್ಟಿ, ಪೊಲೀಸ ಇನ್ಸಪೆಕ್ಟರ, ಪಿಎಸ್ಐ ಮಂಜುನಾಥ, ನಾಯಕ (ಕಾ&ಸು) ಇವರ ನೇತೃತ್ವದಲ್ಲಿ ಚಂದ್ರಶೇಖರ, ಸಿ, ಪಿಎಸ್ಐ-2 ಹಾಗೂ ಸಿಬ್ಬಂದಿ ಜನರಾದ ಸಿಎಚ್ಸಿ ಬನಂ 1048 ಚಿ. ಎನ್. ಬಳಗನ್ನವರ, ಸಿಎಚ್ ಬನಂ: 1091 ಬಿ. ಬಿ. ಕಡ್ಡಿ, ಸಿಪಿಸಿ ಬನಂ: 1409 ಎಚ್. ಎಲ್. ಯರಗುದ್ರಿ, ಸಿಪಿಸಿ ಬನಂ: 1472 ಎ. ಎಮ್. ಜಮಖಂಡಿ, ಇವರು ಕಾರ್ಯಚರಣೆಯಲ್ಲಿ ಭಾಗಿಯಾಗಿ ಪ್ರಕರಣವನ್ನು ಭೇದಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿ/ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ ಆಯುಕ್ತ ಸಿದ್ಧರಾಮಪ್ಪ ಅವರು ಶ್ಲಾಘಿಸಿ ನಗದು ಬಹುಮಾನ ಘೋಷಿಸಿದ್ದಾರೆ.