This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ಸರಕಾರದ ವಿರುದ್ಧ ಸಿಡಿದೆದ್ದ ಬೆಳಗಾವಿ ಸೇವಕ ಶಂಕರ ಪಾಟೀಲ ..!


ಸರಕಾರದ ವಿರುದ್ಧ ಸಿಡಿದೆದ್ದ ಸೇವಕ ಶಂಕರ ಪಾಟೀಲ ..!

14 ತಿಂಗಳು ಕಳೆದರೂ ಯಾಕಿಲ್ಲಾ ಅಧಿಕಾರ..!

ಬೆಳಗಾವಿ : MLA & MP ಗಳು ಆಯ್ಕೆಯಾಗಿ ವಾರದೊಳಗೆ ಅಧಿಕಾರ ಸ್ವಿಕರಿಸಿ ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ಸಚಿವರಾಗಿ ಮೆರೆದಾಡುವ ಈ ಕಾಲದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಗೆ ಸೇವಕರಾಗಿ ಆಯ್ಕೆಯಾಗಿ 14 ತಿಂಗಳು ಕಳೆದರೂ ಸರಕಾರ ಮಾತ್ರ ಇವರಿಗೆ ಅಧಿಕಾರ ನೀಡುತಿಲ್ಲ.

ಅದಕ್ಕಾಗಿ.. ನಮ್ಮನ್ನು ಆಯ್ಕೆ ಮಾಡಿರುವ ಮತದಾರರು ಮಾಡಿರುವ ಪಾಪವಾದರೂ ಏನು..? ಯಾವ ವ್ಯಕ್ತಿಯ ಹಿತಾಸಕ್ತಿಗಾಗಿ ನೀವು ನಮಗೆ ಅಧಿಕಾರ ನೀಡುತಿಲ್ಲ ಎಂದು ವಾರ್ಡ್ ನಂ 7 ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಭರ್ಜರಿ ಮತ ಪಡೆದು ಆಯ್ಕೆಯಾಗಿರುವ ನಗರ ಸೇವಕ ಶಂಕರಗೌಡ ಪಾಟೀಲ ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ,ಇಂಗ್ಲಿಷ್ ಹಾಗೂ ಮರಾಠಿ ಭಾಷೆಯಲ್ಲಿ ಪ್ರಕಟಣೆಗಳನ್ನು ಬರೆದು ಪ್ರತಿಭಟನೆ ನಡೆಸಿದ್ದ‍ಾರೆ.

ಎಚ್ಚರಿಕೆ..?

ಪಾಲಿಕೆ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿರುವ ಇವರು ತಕ್ಷಣ ಅಧಿಕಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ನನ್ನನ್ನು ಆಯ್ಕೆಮಾಡಿರುವ ಮತದಾರರೊಂದಿಗೆ ಬೃಹತ್‌ ಪ್ರತಿಭಟನೆ ನಡೆಸುವುದಾಗಿ ತಮ್ಮ ಸಾಮಾಜಿಕ ಜಾಲತಾಣ ಮುಖಾಂತರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸ್ಮಾರ್ಟ್ ಸಿಟಿ ಹಾಗೂ ಮಹಾನಗರ ಪಾಲಿಕೆ ಬೆಜವಾಬ್ದಾರಿ ಮತ್ತು ದುರಾಡಳಿತದಿಂದ ಬೇಸತ್ತಿರುವ ಬೆಳಗಾವಿ ಜನತೆಗಾಗಿ ಇನ್ನಾದರೂ ಬೊಮ್ಮಾಯಿ ಸರಕಾರ ಜನ ಆಯ್ಕೆಮಾಡಿರುವ ನಗರ ಸೇವಕರಿಗೆ ತಕ್ಷಣ ಅಧಿಕಾರ ಪದಗ್ರಹಣ ಮುಹೂರ್ತ ನಿಗದಿ ಮಾಡಿ ಅವರಿಂದ ಉತ್ತಮ ಆಡಳಿತ ನಡೆಸಲು ಅನುವುಮಾಡಿಕೊಡುತ್ತದೆ ಎಂದು ಕಾದು ನೋಡಬೇಕು.


Jana Jeevala
the authorJana Jeevala

Leave a Reply