ದೆಹಲಿ :
ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತ್ರತ್ವದಲ್ಲಿ ಗೋವಾ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬುಧವಾರ ರಾತ್ರಿ ಭೇಟಿಯಾಗಿದೆ.
ಮಹದಾಯಿ ಯೋಜನೆಗೆ ಕೇಂದ್ರ ಸರಕಾರ ಡಿ ಪಿ ಆರ್ ಸಲ್ಲಿಸಲು ಒಪ್ಪಿಗೆ ನೀಡಿರುವುದನ್ನು ಗೋವಾ ಆಕ್ಷೇಪಿಸಿದೆ.
ಈ ಸಂದರ್ಭದಲ್ಲಿ ಅಮಿತ್ ಶಾ ಅವರು ದೇಖೆಂಗೆ (ನೋಡೋಣ) ಎಂದು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿದ್ದು ಗೋವಾದವರೇ ಆಗಿರುವ ಕೇಂದ್ರ ಸಚಿವ ಶ್ರೀಪಾದ ಎಸ್ಸೋ ನಾಯಕ್ ಅವರನ್ನು ಒಳಗೊಂಡ ನಿಯೋಗ ಮಹದಾಯಿ ನದಿ ನೀರಿನ ಯೋಜನೆಯಿಂದ ಗೋವಾದಲ್ಲಿ ನೀರಿನ ಕೊರತೆ ಕಾಣಿಸಿಕೊಳ್ಳಲಿದೆ. ಹೀಗಾಗಿ ಯೋಜನೆಗೆ ನೀಡಿರುವ ಅನುಮತಿ ಹಿಂಪಡೆಯುವಂತೆ ಆಗ್ರಹಿಸಿದ್ದು ಮಹದಾಯಿ ಪ್ರಾಧಿಕಾರ ರಚಿಸುವಂತೆಯೂ ಒತ್ತಾಯಿಸಿದೆ ಎನ್ನಲಾಗಿದೆ.


