ಬೆಳಗಾವಿ : ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆಯ ಹಾಗೂ ಕರ್ನಾಟಕದ ನೀರಾವರಿ ತಜ್ಞ ಇಂಜನಿಯರ್ ಎಸ್.ಜಿ. ಬಾಳೇಕುಂದ್ರಿ ಜನ್ಮ ದಿನದ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ರವಿವಾರ ಕನ್ನಡ ಭವನ ದಲ್ಲಿ ಜರುಗಿತು.
ನಿವೃತ್ತ ನ್ಯಾಯಾಧೀಶ ಉಲ್ಲಾಸ ಬಾಳೇಕುಂದ್ರಿ , ಇಂಜನಿಯರ್ ಎಸ್.ಜಿ. ಬಾಳೇಕುಂದ್ರಿ ಅವರ ಬದುಕು ಬರಹ ಕುರಿತು ಮಾತನಾಡಿ, ಆಲಮಟ್ಟಿ ಡ್ಶಾಂ
165ಕೋಟಿ ವೆಚ್ಚ ಬಚ್ಚಾವತ್ ಕಮಿಟಿ ಶಿಫಾರಸು ಮಾಡಿದರು. 1977-88 ರ ಸಾಲಿನಲ್ಲಿ ಕಾಡಾ ನಿರ್ದೇಶಕರಾಗಿ ನಿವೃತ್ತರಾದರು. ಬೆಳಗಾವಿ ಜಿಲ್ಲೆಯ ಹಲವು ಸೇತುವೆ ನಿರ್ಮಾಣ ಕಾರ್ಯ ಭರದಿಂದ ನಿರ್ಮಾಣ ಕೈಗೊಂಡಿದ್ದರು. ಉತ್ತರ ಕರ್ನಾಟಕದ ಬಹುತೇಕ ನೀರಾವರಿ ಒದಗಿಸುವ ಹಿಡಕಲ್ ಡ್ಶಾಂ, ಆಲಮಟ್ಟಿ ಡ್ಶಾಂ, ನವಿಲು ತೀರ್ಥ ಡ್ಶಾಂ, ನಾರಾಯಣಪುರ ಆಣೆಕಟ್ಟು ನಿರ್ಮಾಣ ಮಾಡುವಲ್ಲಿ ಅವರ ಸೇವೆ ಸ್ಮರಣೀಯ ಎಂದರು.
ಇಂಜನಿಯರ ಬಸವರಾಜ ಶೆಟ್ಟರ ಮಾತನಾಡಿ, ಎಸ್.ಜಿ. ಬಾಳೇಕುಂದ್ರಿ ಅವರು ನೀರಾವರಿ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ. ಕರ್ನಾಟಕದಲ್ಲಿ ಲೋಕೋಪಯೋಗಿ ಇಲಾಖೆಯ ಮುಖ್ಯ ಸಿವಿಲ್ ಇಂಜನಿಯರ್ ಆಗಿ ಉತ್ತರ ಕರ್ನಾಟಕದ ಹಲವು ಪ್ರದೇಶಗಳಿಗೆ ನೀರಿನ ಅಭಾವ ನೀಗಿಸಿದರು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಮಂಗಲಾ ಮೆಟ್ಟಗುಡ್ಡ, ಕಾರ್ಯದರ್ಶಿ ಎಂ.ವೈ. ಮೆಣಸಿನಕಾಯಿ, ವೀರಭದ್ರ ಅಂಗಡಿ,ತಾಲ್ಲೂಕ ಅಧ್ಯಕ್ಷರಾದ ಸುರೇಶ ಹಂಜಿ, ಡಾ.ಅವಿನಾಶ
ಶಿಂಧಿಹಟ್ಟಿ, ಸಾಹಿತಿಗಳಾದ ಸ.ರಾ.ಸುಳಕೂಡೆ,
ಪ್ರಾ. ಬಿ.ಬಿ.ಮಠಪತಿ, ಆರ್.ಬಿ.ಬನಶಂಕರಿ, ಹೇಮಾ ಸೋನೋಳ್ಳಿ, ಜಯಶೀಲಾ ಬ್ಶಾಕೊಡ, ಬೀನಾ ಕತ್ತಿ,
ಮಲ್ಲಿಕಾರ್ಜುನ ಕೋಳಿ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ತಲ್ಲೂರ ವಂದಿಸಿದರು. ಕಸಾಪ ಸದಸ್ಯರು ಸಾಹಿತ್ಯ ಆಸ್ತಕರು ಉಪಸ್ಥಿತರಿದ್ದರು.