ಬೆಳಗಾವಿ : ಹುಕ್ಕೇರಿ ತಾಲೂಕಿನ ಸೋಲಾಪುರ ಗ್ರಾಮದಲ್ಲಿ ದುರ್ಗಾದೇವಿ ಮೂರ್ತಿ ವಿಸರ್ಜನೆ ನಂತರ ಮರಳುವಾಗ ಅನ್ಯ ಕೋವಿನ ಯುವಕರು ಕಲ್ಲು ತೂರಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಇದರಿಂದ ಏಳು ಭಕ್ತರು ಗಾಯಗೊಂಡಿದ್ದಾರೆ. ಒಂದು ಕಾರು ಮತ್ತು ನಾಲ್ಕು ಬೈಕ್ ಜಖಂಗೊಂಡಿವೆ.
ನವರಾತ್ರಿ ಹಬ್ಬದ ಅಂಗವಾಗಿ ಗ್ರಾಮದಲ್ಲಿ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಹಬ್ಬದ ನಂತರ ಮೂರ್ತಿ ಪ್ರತಿಷ್ಠಾಪನೆ ಮೆರವಣಿಗೆ ಹೋಗಿ ವಿಸರ್ಜನೆ ಮಾಡಿ ಮರಳುವಾಗ ತಡರಾತ್ರಿ ಆಗಿದೆ. ಆಗ ಅನ್ಯ ಕೋಮಿಗೆ ಸೇರಿದ ಯುವಕರು ಒಂದೇ ಸಮನೆ ಕಲ್ಲುತೂರಾಟ ಮಾಡಿದ್ದಾರೆ. ಇದರಿಂದ ಭಕ್ತರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಶಾಸಕ ನಿಖಿಲ್ ಕತ್ತಿ ಅವರು ಗ್ರಾಮಕ್ಕೆ ಆಗಮಿಸಿ ಧೈರ್ಯ ಹೇಳಿದ್ದಾರೆ. ಶಾಂತಿಯಿಂದ ಇದ್ದ ಗ್ರಾಮದಲ್ಲಿ ಇದೀಗ ಕೋಮು ಸಂಘರ್ಷ ಏರ್ಪಟ್ಟಿದ್ದು ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.