ಚಿಕ್ಕೋಡಿ : ಹಿರಿಯ ಪತ್ರಕರ್ತ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸಂಯುಕ್ತ ಕರ್ನಾಟಕ ದಿನಪತ್ರಿಕೆ ವರದಿಗಾರ ಸಂಜೀವ ಕಾಂಬಳೆ ಅವರು ಕಳೆದ 22 ವರ್ಷಗಳಿಂದ ಮಾಧ್ಯಮ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪತ್ರಿಕಾರಂಗಕ್ಕೆ ಸೇರಿದಾಗಿನಿಂದ ಅವರು ಜನರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಸರಕಾರದ ಕಣ್ಣು ತೆರೆಸುವ ಕಾರ್ಯ ಮಾಡಿದ್ದಾರೆ. ಮೂಲತಃ ಇವರು ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬ್ಯಾಕೂಡ ಗ್ರಾಮದ ಸರಕಾರಿ ಶಾಲೆ ಹಾಗೂ ರಾಯಬಾಗ ಆರ್ ವಿ ಆರ್ ಪ್ರೌಢ ಶಾಲೆಯಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ.
ಪತ್ರಿಕೋದ್ಯಮದಲ್ಲಿ 2007-08 ರಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ (ಎಂ.ಎ) ಪದವಿ ಪಡೆದುಕೊಂಡಿದ್ದಾರೆ. ನಂತರ ಇವರು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಹಾವೇರಿ ಜಿಲ್ಲೆಯ ವರದಿಗಾರನಾಗಿ ಸೇವೆ ಪ್ರಾರಂಭಿಸಿದ ಇವರು ಮುಂದೆ ಈಟಿವಿ, ಉದಯವಾಣಿ, ವಿಶ್ವವಾಣಿ ದಿನಪತ್ರಿಕೆಯಲ್ಲಿ ಕಾರ್ಯ ಮಾಡಿದ್ದಾರೆ. ಇದೀಗ ಇವರು ಚಿಕ್ಕೋಡಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೋವಿಡ್ ಎಂಬ ಹೆಮ್ಮಾರಿಯಲ್ಲಿ ಲಾಕ್ ಡೌನ್ ಆದಾಗ ಅನ್ನ ಇಲ್ಲದೆ ನಿರ್ಗತಿಕರು ಪರದಾಡಿದರು. ಇವರ ಬರೆದ ವರದಿಯಿಂದ ಜಿಲ್ಲಾಡಳಿತದ ಗಮನ ಸೆಳೆದು ಹಸಿದ ಹೊಟ್ಟಿ ತುಂಬಿಸುವ ಮಹಾನ್ ಕಾರ್ಯ ಮಾಡಿದ್ದಾರೆ. ಲಾಕ್ ಡೌನ್ ಲ್ಲಿ ಮಾಜಿ ದೇವದಾಸಿಯರಿಗೆ ಸರಕಾರ ನೀಡುತ್ತಿದ್ದ ಮಾಸಾಶನ ನೀಡಿರಲಿಲ್ಲ. ವಯೋವೃದ್ದ ದೇವದಾಸಿ ತಾಯಿಂದಿರಲ್ಲಿ ಕೆಲವರು ಮಾರಕ ರೋಗಗಳಿಂದ ಬಳಲುತ್ತಿದ್ದರು. ಇವರು ಬರೆದ ಲೇಖನದಿಂದಾಗಿ ವರದಿ ಬಂದ ಎರಡು ದಿನಗಳಲ್ಲಿ ದೇವದಾಸಿಯರಿಗೆ ಸರಕಾರ ಮಾಸಾಶನ ನೀಡಿತು.
ಮಳೆಗಾಲದಲ್ಲಿ ಪ್ರವಾಹ ಪೀಡಿತ ಗ್ರಾಮಗಗಳ ಸಮಸ್ಯೆ, ಬರಗಾಲದ ಬವಣೆ ಹಾಗೂ ಸಾರ್ವಜನಿಕರ ನೂರಾರು ಲೇಖನಗಳನ್ನು ಬರೆದಿದ್ದಾರೆ. ಇವರು ಇಲ್ಲಿಯವರಿಗೆ 5 ಸಾವಿರಕ್ಕಿಂತ ಹೆಚ್ಚು ವಿಶೇಷ ಲೇಖನ ಬರೆದು ಹಲವಾರು ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಮಹತ್ವ ಕಾರ್ಯ ಮಾಡಿದ್ದಾರೆ. ಇವರ ಸಾಮಾಜಿಕ
ಸೇವೆ ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತವಾಗಿ ಬೆಳಗಾವಿ ಜಿಲ್ಲಾಡಳಿತ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಇದೀಗ ಚಿಕ್ಕೋಡಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಜೀವ ಕಾಂಬಳೆ ಅವರು ಅವರು ವಿವಿಧ ಸಮಸ್ಯೆಗಳು ಹಾಗೂ ಜನಪರವಾದ ಸಾಕಷ್ಟು ಲೇಖನಗಳನ್ನು ಬರೆದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸರಕಾರದ ಗಮನ ಸೆಳೆಯುವ ಕಾರ್ಯ ಮಾಡಿದ್ದಾರೆ.ಅವರಿಗೆ ಇದೀಗ ಬೆಳಗಾವಿ ಜಿಲ್ಲಾಡಳಿತ ಜಿಲ್ಲಾಮಟ್ಟದ ರಾಜ್ಯೊತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವದು ಹೆಮ್ಮೆ ಸಂಗತಿ.

 
             
         
         
        
 
  
        
 
    