ಹಿರಿಯ ಪತ್ರಕರ್ತ ಪ್ರಶಾಂತ ಬರ್ಡೆ ನಿಧನ..!
ಅವಿವಾಹಿತರಾಗಿದ್ದ ಬರ್ಡೆಗೆ ಪತ್ರಿಕೋದ್ಯಮವೇ ಕುಟುಂಬವಾಗಿತ್ತು.
ಬರ್ಡೆ ಅಗಲಿಕೆಗೆ ಕಂಬನಿ ಮಿಡಿದ ಪತ್ರಿಕಾ ರಂಗ..!
ಬೆಳಗಾವಿ :ಮರಾಠಿ ಪತ್ರಿಕೆಯ ಹಿರಿಯ ಪತ್ರಕರ್ತ, ಬರಹಗಾರ, ಚಿಂತಕ ಹಾಗೂ ಪತ್ರಿಕಾ ರಂಗದಲ್ಲಿ ಸ್ನೇಹಜೀವಿ ಎಂದು ಖ್ಯಾತ ಪಡೆದಿದ್ದ ಪ್ರಶಾಂತ ತುಕಾರಾಮ ಬರ್ಡೆ ಧೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಇಂದು ನೆಹರು ನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಇವರಿಗೆ 70 ವರ್ಷ ವಯಸ್ಸಾಗಿತ್ತು.
ಇವರು ಮರಾಠಿ ರಣಜುಂಝಾರ ಹಾಗೂ ಪುಢಾರಿ ಪತ್ರಿಕೆಯಲ್ಲಿ ದಶಕಗಳ ಕಾಲ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಹಿರಿಯ ಪತ್ರಕರ್ತರಾಗಿದ್ದ ಇವರು ಬೆಳಗಾವಿಯ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಯ ಪತ್ರಕರ್ತರೊಂದಿಗೆ ಆಳವಾದ ಸ್ನೇಹ ಬಾಂಧವ್ಯ ಹೊಂದಿದ್ದರು.
ಮೃತರ ಅಗಲಿಕೆಗೆ ಬೆಳಗಾವಿ ಪತ್ರಕರ್ತರ ಸಂಘ, ಕಾರ್ಯನಿರತ ಪತ್ರಕರ್ತರ ಸಂಘ, ಹಿರಿಯ ಹಾಗೂ ಯುವ ಪತ್ರಕರ್ತರು, ಸಾಹಿತಿಗಳು ಸೇರಿದಂತೆ ಅಧಿಕಾರಿಗಳು ಕಂಬನಿ ಮಿಡಿದಿದ್ದಾರೆ.
ಬರ್ಡೆ ಅವಿವಾಹಿತರಾಗಿದ್ದರು. ಇವರಿಗೆ ಪತ್ರಿಕೋದ್ಯಮವೇ ಕುಟುಂಬವಾಗಿತ್ತು.
ಮೃತರಿಗೆ ಒರ್ವ ಹಿರಿಯ ಸಹೋದರ, 6 ಜನ ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.ಇಂದು ಸಂಜೆ 7 ಗಂಟೆಗೆ ಸದಾಶಿವನಗರದಲ್ಲಿರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.