ಬೆಳಗಾವಿ: ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯರಾಗಿ ಬೆಳಗಾವಿಯ ಇಬ್ಬರು ಹಿರಿಯ ಪತ್ರಕರ್ತರು ಆಯ್ಕೆಯಾಗಿದ್ದಾರೆ.
ನ್ಯೂಸ್ 1 ಹಿರಿಯ ವರದಿಗಾರ ಶ್ರೀಕಾಂತ ಕುಬಕಡ್ಡಿ ಹಾಗೂ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಹಿರಿಯ ವರದಿಗಾರ್ತಿ ಕೀರ್ತಿ ಶೇಖರ ಕಾಸರಗೋಡು ಅವರನ್ನು ಆಯ್ಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇವರನ್ನು “ಜನ ಜೀವಾಳ” ದಿನ ಪತ್ರಿಕೆ ಹಾಗೂ “ಜನ ಸಾಹಿತ್ಯ ಪೀಠ” ತುಂಬು ಹೃದಯದಿಂದ ಅಭಿನಂದಿಸಿದೆ.