ಬೆಳಗಾವಿ : ಓಡಿಸ್ಸಾದ ಭುವನೇಶ್ವರದಲ್ಲಿರುವ ಎಸ್.ಒ.ಎ. ವಿಶ್ವವಿದ್ಯಾಲಯದಲ್ಲಿ ದಿನಾಂಕ 21/02/2025 ರಿಂದ 27/02/2025 ರವರೆಗೆ ನಡೆಯುವ ” ರಾಷ್ಟ್ರೀಯ ಭಾವೈಕ್ಯತೆ” ಶಿಬಿರಕ್ಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಎನ್. ಎಸ್. ಎಸ್. ವಿದ್ಯಾರ್ಥಿನಿ ರಕ್ಷಿತಾ ಬಸವರಾಜ ಕೋರಿ ಆಯ್ಕೆಯಾಗಿರುತ್ತಾಳೆ. ವಿದ್ಯಾರ್ಥಿನಿಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಂ. ಜಿ. ಹೆಗಡೆ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.