- FDA ರುದ್ರಣ್ಣ ಆತ್ಮಹತ್ಯೆಗೆ ಕಾರಣವಾಯ್ತಾ ವರ್ಗಾವಣೆ ದಂಧೆ..!
- ಮಂತ್ರಿ ಲಕ್ಷ್ಮೀ ಹೆಸರಲ್ಲಿ ಲಕ್ಷಾಂತರ ರೂ ವಸೂಲಿ ಮಾಡಿ ಮೋಸ ಮಾಡಿದ್ನಾ PA ಸೋಮು..?
- ಮಧ್ಯರಾತ್ರಿ ಮಂತ್ರಿ ಮನೆಗೆ ಹೋದವನನ್ನು ಹೊರದಬ್ಬಿದ್ದಾರು..?
- ಏನಿದು ಬೆಳಗಾವಿ To ಸವದತ್ತಿ ಕಹಾನಿ ..!
ಜನ ಜೀವಾಳ ಸರ್ಚಲೈಟ್ :ಬೆಳಗಾವಿ : ನನ್ನ ಸಾವಿಗೆ ತಹಶಿಲ್ದಾರ ಬಸವರಾಜ ನಾಗರಾಳ, ಲಕ್ಷ್ಮೀ ಹೆಬ್ಬಾಳಕರ ಪಿಎ ಸೋಮು ಹಾಗೂ ಇನ್ನೊಬ್ಬ FDA ಅಶೋಕ ಕಬ್ಬಲಿಗೇರ ಅವರು ಕಾರಣ ಎಂದು ತಡರಾತ್ರಿ ಬೆಳಗಾವಿ ತಹಸೀಲ್ದಾರ ಆಫೀಸ್ ವಾಟ್ಸಪ್ ಗ್ರೂಪ್ ನಲ್ಲಿ ಮೆಸೇಜ್ ಹಾಕಿ ಬೆಳಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ಬೆಳಗಾವಿ ತಹಸೀಲ್ದಾರ ಕೋಣೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರು FDA ರುದ್ದಣ್ಣ ಯಡವಣ್ಣವರ ಅವರ ಸಾವಿನ ಹಿಂದೆ ಅನುಮಾನದ ಹುತ್ತ ಎದ್ದಿದೆ.
ತಂದೆ ಸಾವಿನ ನಂತರ ಅನುಕಂಪದ ಆಧಾರ ಮೇಲೆ ಕಂದಾಯ ಇಲಾಖೆಯಲ್ಲಿ 18 ನೇ ವರ್ಷದಲ್ಲಿ ನೌಕರಿ ಪಡೆದುಕೊಂಡಿದ್ದ ರುದ್ರಣ್ಣ ಖಡಕ ಸಿಬ್ಬಂದಿಯಾಗಿದ್ದ. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ಬೆಳಗಾವಿ ತಹಸೀಲ್ದಾರ ಕಛೇರಿಯಲ್ಲಿನ ಸಹದ್ಯೋಗಿಯೊಂದಿಗೆ ನಡೆದ ಜಗಳದಿಂದಾಗಿ ಬೆಳಗಾವಿ ಬಿಟ್ಟು ಮೂಡಲಗಿ ತಾಲೂಕಿಗೆ ವರ್ಗಾವಣೆಗೊಂಡಿದ್ದ. ಮತ್ತೆ ಒಂದು ವರ್ಷದ ಹಿಂದೆ ಬೆಳಗಾವಿ ತಹಸೀಲ್ದಾರ ಕಛೇರಿಗೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದ ಈತ ಹುದ್ದೆಗಾಗಿ ಕಾಯುತ್ತಿದ್ದ. ಆದರೆ ವರ್ಗಾವಣೆ ದಂಧೆ ಜೋರಾಗಿದ್ದರಿಂದ ಈತನಿಗೆ ಸುಲಭವಾಗಿ ಒಳ್ಳೆಯ ಹುದ್ದೆ ಸಿಕ್ಕಿರಲಿಲ್ಲ.
ಕೊನೆಗೆ ಲಕ್ಷ್ಮಿ ಹೆಬ್ಬಾಳಕರ ಪಿಎ ಸೋಮು ಎಂಬಾತ ಇತನ ಕಡೆಯಿಂದ ಲಕ್ಷಾಂತರ ಪಡೆದು ಈಗಿರುವ ತಹಸೀಲ್ದಾರಗೆ ಹೇಳಿಸಿ ನಿನಗೆ ಹುದ್ದೆ ಕೊಡುವುದಾಗಿ ಹೇಳಿದ್ದ. ಆದರೆ ಸೋಮು ಹೀಗೆ ದಿನಗಳನ್ನು ಕಳೆಯುತ್ತ ಬಂದಿದ್ದ. ಇದರಿಂದಾಗಿ ರುದ್ರಣ್ಣ ನನಗೆ ಹುದ್ದೆ ಕೊಡಿಸು ಇಲ್ಲದಿದ್ದರೆ, ನನ್ನ ಹಣ ವಾಪಸ ಕೊಡು ಎಂದಿದ್ದಾನೆ. ಇದಕ್ಜೆ ಕಕ್ಕಾಬಿಕ್ಕಿಯಾದ ಪಿಎ ತಹಸೀಲ್ದಾರ ಜೊತೆಗೂಡಿ ಡಿಸಿ ಕಛೇರಿಯಿಂದ ಇತನನ್ನು ರಾತೋರಾತ್ರಿ ಇಲ್ಲಿಂದ ಸವದತ್ತಿ ತಾಲೂಕಿನ ಪ್ರವಾಸೋದ್ಯಮ ವಿಭಾಗಕ್ಕೆ ಎತ್ತಂಗಡಿ ಮಾಡಿಸಿದ್ದಾನೆ.
ಸಾವಿನ ಮೆಸೇಜ್ ಹಾಕಿದವನನ್ನು ಗ್ರೂಪಿಂದ ತೆಗದು ಹಾಕಿದ್ದ ತಹಶಿಲ್ದಾರ..!ನನ್ನ ಸಾವಿಗೆ ತಹಶಿಲ್ದಾರ ಬಸವರಾಜ ನಾಗರಾಳ, ಲಕ್ಷ್ಮೀ ಹೆಬ್ಬಾಳಕರ ಪಿಎ ಸೋಮು ಹಾಗೂ ಇನ್ನೊಬ್ಬ FDA ಅಶೋಕ ಕಬ್ಬಲಿಗೇರ ಅವರು ಕಾರಣ ಎಂದು ರಾತ್ರಿ ಬೆಳಗಾವಿ 7 ಗಂಟೆ 49 ನಿಮಿಷಕ್ಕೆ ತಹಸೀಲ್ದಾರ ಆಫೀಸ್ ವಾಟ್ಸಪ್ ಗ್ರೂಪ್ ನಲ್ಲಿ ಮೆಸೇಜ್ ಹಾಕಿದ್ದ ರುದ್ರಣ್ಣನನ್ನು ತಹಶಿಲ್ದಾರ ಅಧಿಕಾರಿಯಾಗಿ ಅಥವಾ ಒಬ್ಬ ಮನುಷ್ಯನಾಗಿ ಕರೆ ಮಾಡಿ ಅಥವಾ ಕರೆದು ಮಾತನಾಡಿಸಿದ್ದರೆ ಆತ ಬಹುಶಃ ಇಂದು ಸಾಯುತ್ತಿರಲಿಲ್ಲ. ಆದರೆ ತಹಶಿಲ್ದಾರ ಅವರನ್ನು ತಕ್ಷಣ ಆ ಗ್ರೂಪನಿಂದ ತೆಗೆದು ಹಾಕಿದ್ದಾನೆ. ಇದು ತಹಶಿಲ್ದಾರನ ಕ್ರೌರ್ಯ ಮನಸ್ಥಿತಿಯನ್ನು ತೋರಿಸಿದೆ.
ನ್ಯಾಯಕ್ಕಾಗಿ ಮಂತ್ರಿ ಮನೆಗೆ ಹೋಗಿದ್ದ ಲಿಂಗಾಯತ ನೌಕರ..!: ಮಂತ್ರಿ ಪಿಎ ಹುದ್ದೆನೂ ಕೊಡಿಸದೇ, ಕೊಟ್ಟ ಹಣ ವಾಪಸ ನೀಡಿದೆ ಮೋಸ ಮಾಡಿದ್ದಕ್ಕೆ ಮನನೊಂದು ಲಿಂಗಾಯತ ಮಂತ್ರಿ ಲಕ್ಷ್ಮೀ ಹೆಬ್ಬಾಳಕರ ನನಗೆ ನ್ಯಾಯ ಕೊಡಿಸುತ್ತಾರೆ ಎಂದು ಮನೆಗೆ ತೆರಳಿದ್ದಾನೆ.
ಹೊರದಬ್ಬಿದ ಗನಮ್ಯಾನ್.?: ಮಂತ್ರಿ ಪಿಎ ಮೋಸ ಮಾಡಿದ್ದಕ್ಕೆ ಮನನೊಂದು ಮಂತ್ರಿ ಲಕ್ಷ್ಮೀ ಹೆಬ್ಬಾಳಕರ ಮನೆಗೆ ನ್ಯಾಯ ಕೇಳಲು ಹೋದ ಸರ್ಕಾರಿ ನೌಕರನನ್ನು ಮಂತ್ರಿ ಗನಮ್ಯಾನ್ ಹೊರದಬ್ಬಿರುವುದಾಗಿ ತಿಳಿದು ಬಂದಿದೆ.
ಇದರಿಂದ ಮತ್ತಷ್ಟು ಮನನೊಂದ ಆತ ಬೆಳಗಿನ ಜಾವದಲ್ಲಿ ತಹಸೀಲ್ದಾರ ಕಛೇರಿಗೆ ತೆರಳಿ ತಹಸೀಲ್ದಾರ ಕೊಠಡಿಯಲ್ಲೇ ವೇಲ್ ನಿಂದ ಕುತ್ತಿಗೆಗೆ ಬಿಗಿದುಕೊಂಡು ನೇಣು ಹಾಕಿಕೊಂಡಿದ್ದಾನೆ.
ಪತ್ನಿಯು ಕೂಡ ಕಂದಾಯ ಇಲಾಖೆ ಸಿಬ್ಬಂದಿ ..!:
ರುದ್ರಣ್ಣ ಎಡವಣ್ಣವರ ಸಹೊದ್ಯೋಗಿಯಾದ ಗಿರಿಜಾ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು. ಅವರು ಕೂಡ ಬೆಳಗಾವಿ ತಹಸೀಲ್ದಾರ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಒಟ್ಟಿನಲ್ಲಿ ರುದ್ರಣ್ಣನ ಸಾವು ಸಹೋದ್ಯೋಗಿಗಳಿಗೆ ನಂಬಲಾಗದ ಘಟನೆಯಾಗಿದೆ. ಒಟ್ಟಿನಲ್ಲಿ ಇತನ ಸಾವಿಗೆ ನ್ಯಾಯ ಸಿಗತ್ತೂ ಇಲ್ವೋ ಎಂದು ಕಾದು ನೋಡಬೇಕು.